ಫೆ.18-20: ಅಜಿಲಮೊಗರು ಮಾಲಿದಾ ಉರೂಸ್
ಮಂಗಳೂರು, ಫೆ.15: ಅಜಿಲಮೊಗರು ಜುಮಾ ಮಸೀದಿಯ ಸಂಸ್ಥಾಪಕ ಹಾಗೂ ಪವಾಡ ಪುರುಷ ಹಝ್ರತ್ ಸೈಯದ್ ಬಾಬಾ ಕ್ರುದ್ದೀನ್ ವಲಿಯವರ ಸ್ಮರಣಾರ್ಥ ವರ್ಷಂಪ್ರತಿ ನಡೆಯುವ 746ನೇ ಮಾಲಿದಾ ಉರೂಸ್ ಫೆ.18ರಿಂದ 20ರವರೆಗೆ ನಡೆಯಲಿದೆ ಎಂದು ಅಜಿಲಮೊಗರು ಹಝ್ರತ್ ಸೈಯದ್ ಬಾಬಾ ಕ್ರುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೆ.18ರಂದು ರಾತ್ರಿ ಬಂಡಾರದ ಹರಕೆ ಆರಂಭವಾಗಲಿದ್ದು, ಫೆ.19ರಂದು ಮಾಲಿದಾ ಹರಕೆ ನಡೆಯಲಿದೆ. ಫೆ.20ರಂದು ಸಮಾರೋಪ ಸಮಾರಂಭ ಹಾಗೂ ಸಾಮೂಹಿಕ ಪ್ರಾರ್ಥನೆ, ಕಂದೂರಿ ಊಟದ ವಿತರಣೆ ನಡೆಯಲಿದೆ. ಈ ಮೂರು ದಿನಗಳಲ್ಲೂ ಪ್ರಖ್ಯಾತ ಸಾದಾತುಗಳು ಹಾಗೂ ಧಾರ್ಮಿಕ ವಿದ್ವಾಂಸರಿಂದ ಪ್ರಾರ್ಥನೆ ಹಾಗೂ ಪ್ರವಚನ ನಡೆಯಲಿದೆ ಎಂದವರು ವಿವರಿಸಿದರು.
ಈ ಸಂದರ್ಭ ಮಸೀದಿಯ ಧರ್ಮಗುರು ಪಿ.ಎಸ್.ತ್ವಾಹಾ ಸಅದಿ, ಇಬ್ರಾಹೀಂ ಅಜಿಲಮೊಗರು, ಆದಂ, ಜಿ.ಸುಲೈಮಾನ್ ಅಜಿಲಮೊಗರು ಉಪಸ್ಥಿತರಿದ್ದರು.
Next Story