ಮಾರ್ಚ್ 1ರಿಂದ 31ರವರೆಗೆ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಿಂದ ಸದಸ್ಯತ್ವ ಅಭಿಯಾನ
ಮಂಗಳೂರು, ಫೆ.15: ಬ್ಯಾರಿ ಸಮುದಾಯದ ವ್ಯಾಪಾರಸ್ತರನ್ನು ಒಂದೇ ವೇದಿಕೆಯಡಿ ತಂದು ವ್ಯಾಪಾರದಲ್ಲಿ ಅನುಕೂಲಕರ ಹಾಗೂ ಪ್ರೋತ್ಸಾಹದಾಯಕ ವಾತಾವರಣ ನಿರ್ಮಿಸಲು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ)ಯಿಂದ ಮಾರ್ಚ್ 1ರಿಂದ ಮಾರ್ಚ್ 31ರವರೆಗೆ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಬಿಸಿಸಿಐಯನ್ನು ಮುಂದಿನ ಘಟ್ಟಕ್ಕೆ ಕೊಂಡೊಯ್ದು ಬ್ಯಾರಿಗಳ ಏಳಿಗೆಗಾಗಿ ಶ್ರಮಿಸುವ ಉದ್ದೇಶವಿಟ್ಟುಕೊಂಡಿರುವ ಆಸಕ್ತ ಬ್ಯಾರಿಗಳೆಲ್ಲರು ಬಿಸಿಸಿಐಯ ಸದಸ್ಯತ್ವ ಪಡೆಯುವಂತೆ ಬಿಸಿಸಿಐಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ, ನೆಲಮಹಡಿ, ವಿಶ್ವಾಸ್ ಕ್ರೌನ್, ಓಲ್ಡ್ ಕಂಕನಾಡಿ ಬೈಪಾಸ್ ರಸ್ತೆ, ಮಂಗಳೂರು. ಮೊ.ಸಂ.: 9535563897, 0824-4262323. ಇ-ಮೇಲ್: bearyschamber@gmail.com. ಅನ್ನು ಸಂಪರ್ಕಿಸಬಹುದು.
Next Story