ನಿವೃತ್ತ ಶಿಕ್ಷಕಿ, ಹೋರಾಟಗಾರ್ತಿ ಸೆಲಿನ್ ಅರ್ಹಾನ್ನ ನಿಧನ
ಮಂಗಳೂರು, ಫೆ.15: ಸಾಮಾಜಿಕ ಕಾರ್ಯಕರ್ತೆ, ನಿವೃತ್ತ ಶಿಕ್ಷಕಿ, ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಸೆಲಿನ್ ಅರ್ಹಾನ್ನ (87) ಇಂದು ನಿಧನರಾದರು.
ದ.ಕ. ಪರಿಸರಾಸಕ್ತ ಒಕ್ಕೂಟ, ಮಂಗಳೂರು ನಗರ ಪರಿಸಾರಸಕ್ತರ ಒಕ್ಕೂಟ ಸೇರಿದಂತೆ ಹಲವಾರು ಜನಪರ ಸಂಘಟನೆ, ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಲಿಂಗ ಸಮಾನತೆ, ಆದಿವಾಸಿ ಹಕ್ಕುಗಳು ಮತ್ತು ಜನಪರ ಆಂದೋಲನಗಳಲ್ಲಿ ಭಾಗವಹಿಸುತ್ತಿದ್ದ ಅವರು, ತಮ್ಮ ಜತೆಗಿದ್ದವರಿಗೆ ಮಾರ್ಗದರ್ಶಕರಾಗಿದ್ದರು ಎಂದು ದ.ಕ. ಪರಿಸರಾರಸ್ತಕರ ಒಕ್ಕೂಟ ಪ್ರಕಟನೆಯಲ್ಲಿ ಮೃತರಿಗೆ ಸಂತಾಪ ಸೂಚಿಸಿದೆ.
Next Story