ಬಿ.ಸಿ.ರೋಡ್: ರೈಲ್ವೆ ಮೇಲ್ಸೆತುವೆಯ ಮೀಟರ್ ಗೇಜ್ನಲ್ಲಿ ಸಿಲುಕಿಕೊಂಡ ಲಾರಿ
ಬಂಟ್ವಾಳ, ಫೆ. 16: ಬಿ.ಸಿ.ರೋಡಿನ ಕೈಕಂಬ ಸಮೀಪದಲ್ಲಿ ಅಳವಡಿಸಲಾಗಿರುವ ರೈಲ್ವೆ ಮೇಲ್ಸೆತುವೆಯ ಮೀಟರ್ ಗೇಜ್ನಲ್ಲಿ ಲಾರಿಯೊಂದು ಸಿಲುಕಿಕೊಂಡ ಘಟನೆ ಶನಿವಾರ ನಡೆದಿದೆ.
ಬಳ್ಳಾರಿಯಿಂದ ಮಲ್ಲೂರು ಕಡೆಗೆ ಗೊಬ್ಬರ ಹೇರಿಕೊಂಡು ಹೋಗುವ ವೇಳೆಗೆ ಕೈಕಂಬದಲ್ಲಿರುವ ರೈಲ್ವೆ ಮೇಲ್ಸೆತುವೆಯ ಸನಿಹದಲ್ಲಿ ಘನ ಗಾತ್ರದ ವಾಹನಗಳಿಗೆ ನಿಷೇಧಿಸಿ ಹಾಕಲಾದ ಮೀಟರ್ ಗೇಜ್ನಲ್ಲಿ ಲಾರಿ ಸಿಲುಕಿಕೊಂಡಿದೆ. ಪರಿಣಾಮ ಮೀಟರ್ ಗೇಜ್ನ ಒಂದು ಬದಿಯ ಕಂಬಕ್ಕೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಲ್ಲ.
ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಮುಂದಿನ ಕ್ರಮಕೈಗೊಂಡರು. ಈ ಹಿಂದೆ ಅನೇಕ ಬಾರಿ ಇಂತಹ ಘಟನೆಗಳು ಈ ಸ್ಥಳದಲ್ಲಿ ನಡೆದಿದೆ. ಮತ್ತೆ ಮತ್ತೆ ಘಟನೆಗಳು ಪುನರಾವರ್ತನೆ ಆಗುತ್ತಲೆ ಇದ್ದರೂ ರೈಲ್ವೆ ಇಲಾಖೆಯವರು ಸಮಸ್ಯೆ ಪರಿಹರಿಸುವ ಹಾಗೂ ಸೂಚನಾಫಲಕುವ ಕಾರ್ಯಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Next Story