ಮಾ. 1ರಿಂದ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ
ಮಂಗಳೂರು, ಫೆ.16: ಎಚ್ಕೆಎ ಬಾವಾ ಮೆಮೋರಿಯಲ್ ಟ್ರಸ್ಟ್ನ ಪ್ರಯೋಜಕತ್ವದಲ್ಲಿ ಮಾರ್ಚ್ 1ರಿಂದ ಉಳ್ಳಾಲದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಉಳ್ಳಾಲ ಮಾಸ್ತಿಕಟ್ಟೆಯ ಭಾರತ್ ಶಾಲೆಯ ವಾಣಿಜ್ಯ ಕಟ್ಟಡದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ 2 ಬ್ಯಾಚ್ಗಳಲ್ಲಿ ನೀಡಲಾಗುವ ಈ ತರಬೇತಿ ಶಿಬಿರಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊ. 8722263057ನ್ನು ಸಂಪರ್ಕಿಸಬಹುದು ಎಂದು ಟ್ರಸ್ಟ್ನ ಗೌರವ ಕಾರ್ಯದರ್ಶಿ ನಿಸಾರ್ ಮುಹಮ್ಮದ್ ತಿಳಿಸಿದ್ದಾರೆ.
Next Story