ಬಿಗ್ ಬಝಾರ್: ಫೆ.16ರಿಂದ ವಿಶೇಷ ಎಕ್ಸ್ಚೇಂಜ್ ಮೇಳ
ಮಂಗಳೂರು, ಫೆ.16: ಮಂಗಳೂರಿನ ಅತ್ತಾವರ ಮತ್ತು ಬಿಜೈ ಬಿಗ್ ಬಝಾರ್ ಮಳಿಗೆಗಳಲ್ಲಿ ಫೆ.16ರಿಂದ ಮಾಚ್ 24ರವರೆಗೆ ‘ದಿ ಗ್ರೇಟ್ ಎಕ್ಸ್ಚೇಂಜ್ ಮೇಳ’ವನ್ನು ಹಮ್ಮಿಕೊಳ್ಳಲಾಗಿದೆ.
ಈ ಮೇಳದಲ್ಲಿ ಗ್ರಾಹಕರು ಹಳೆಯ ವಸ್ತುಗಳನ್ನು ತಂದು ಕೊಟ್ಟು ಅದರ ಮೇಲೆ ಬಿಗ್ ಬಝಾರ್ ನ ಎಕ್ಸ್ಚೇಂಜ್ ಕೂಪನ್ನ್ನು ಪಡೆದುಕೊಳ್ಳಬಹುದು. ಹಳೆಯ ವಸ್ತುಗಳ ವಿನಿಮಯ ಬೆಲೆಯಾಗಿ ಒಂದು ಕೆ.ಜಿ. ಹಳೆಯ ನ್ಯೂಸ್ ಪೇಪರ್ಗೆ 50 ರೂ., ಹಳೆಯ ಪಾತ್ರೆಗಳು 300 ರೂ. ಹಳೆಯ ಪ್ಲಾಸ್ಟಿಕ್ಗಳು 100 ರೂ., ಹಳೆಯ ಇಲೆಕ್ಟ್ರಾನಿಕ್ಸ್ ವಸ್ತುಗಳಿಗೆ 5,000 ರೂ. ವರೆಗೆ ಹಾಗೂ ಇತರ ಎಲ್ಲ ವಸ್ತುಗಳಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು.
ಗ್ರಾಹಕರು ಗೃಹ ಬಳಕೆಯ ಕಿಚನ್ ವೇರ್, ಹೋಮ್ ವೇರ್, ಬೆಡ್ಶೀಟ್, ಸ್ಪೋರ್ಟ್ಸ್ ಐಟಮ್ ಮತ್ತು ಮಕ್ಕಳ ಆಟಿಕೆಗಳ ವಿಭಾಗಗಳಲ್ಲಿ ಎಕ್ಸ್ಚೇಂಜ್ ಕೂಪನ್ ಮೂಲಕ ಹೆಚ್ಚುವರಿಯಾಗಿ ಶೇ.20ರಷ್ಟು ಹಾಗೂ ದಿನನಿತ್ಯದ ಆಹಾರ ಸಾಮಗ್ರಿ, ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಶೇ.10ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.
ಫ್ಯಾಶನ್ ಬಟ್ಟೆ-ಬರೆಗಳ ವಿನಿಮಯ ಕೊಡುಗೆಯು ಫೆ.16ರಿಂದ ಮಾಚ್ 10ರವರೆಗೆ ನಡೆಯಲಿದೆ. ಗ್ರಾಹಕರು ತಮ್ಮ ಹಳೆಯ ಟಿ-ಶರ್ಟ್ನ ಮೇಲೆ 100 ರೂ., ಜೀನ್ಸ್ಗೆ 250 ರೂ., ಫೂಟ್ವೇರ್ಗೆ 150 ರೂ., ಲೇಡಿಸ್ ಎಥ್ನಿಕ್ ವೇರ್ಗೆ 100 ರೂ., ಮಕ್ಕಳ ಬಟ್ಟೆ-ಬರೆಗಳ ಮೇಲೆ 50 ರೂ. ಎಕ್ಸ್ಚೇಂಜ್ ಕೂಪನ್ ಕೊಡಲಾಗುವುದು ಎಂದು ಬಿಗ್ ಬಝಾರ್ ಮಳಿಗೆಯ ಪ್ರಕಟನೆ ತಿಳಿಸಿದೆ.