ಪೂಪಾಡಿಕಲ್ಲು: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಾರು
ಕೊಣಾಜೆ, ಫೆ.17: ಮುಡಿಪು ಸಮೀಪದ ಪೂಪಾಡಿಕಲ್ಲು ಬಳಿ ಚಲಿಸುತ್ತಿದ್ದ ಕಾರೊಂದಕ್ಕೆ ಏಕಾಏಕಿ ಬೆಂಕಿ ಹತ್ತಿಕೊಂಡ ಘಟನೆ ರವಿವಾರ ಮಧ್ಯಾಹ್ನ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಮಂದಿ ಪಾರಾಗಿದ್ದಾರೆ.
ಮುಡಿಪು ಸಮೀಪದ ಪೂಪಾಡಿಕಲ್ಲು ಬಳಿ ಚಲಿಸುತ್ತಿದ್ದ ಮಾರುತಿ 800 ಕಾರ್ ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಕಾರಿನೊಳಗಿದ್ದ ದಂಪತಿ ಕಾರು ನಿಲ್ಲಿಸಿ ಹೊರಗೆ ಹಾರಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.
Next Story