ಪುಂಜಾಲಕಟ್ಟೆ: ಪಾಪ್ಯುಲರ್ ಫ್ರಂಟ್ ಡೇ; ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಬಂಟ್ವಾಳ, ಫೆ.17: ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಪುಂಜಾಲಕಟ್ಟೆ ಸಮಿತಿಯ ವತಿಯಿಂದ ಪುಂಜಾಲಕಟ್ಟೆಯಲ್ಲಿ ರವಿವಾರ ಪಾಪ್ಯುಲರ್ ಫ್ರಂಟ್ ಡೇ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರು ಡಿವಿಷನ್ ಅಧ್ಯಕ್ಷ ನಿಸಾರ್ ಕುದ್ರಡ್ಕ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು.
ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಮಂಗಳೂರು ಝೋನಲ್ ಸಮಿತಿಯ ಸದಸ್ಯರಾದ ಲತೀಪ್ ಪುಂಜಾಲಕಟ್ಟೆ, ಪುಂಜಾಲಕಟ್ಟೆ ಬದ್ರಿಯ ಜುಮಾ ಮಸ್ಜಿದ್ ಜೊತೆ ಕಾರ್ಯದರ್ಶಿ ಖಾದರ್ ಪುಂಜಾಲಕಟ್ಟೆ, ಉಮರ್ ಪುಂಜಾಲಕಟ್ಟೆ, ಉಮರ್ ಎಂ.ಆರ್.ಎಸ್., ಕಾವೇರಿ ಯಹ್ಯಾ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಮೌನ ಪ್ರಾರ್ಥನೆ: ಇದೇ ಸಂದರ್ಭ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಎರಡು ನಿಮಿಷಗಳ ಮೌನ ಪ್ರಾರ್ಥನೆ ಮಾಡಲಾಯಿತು.
ತಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.