ಅಡ್ಡೂರು: ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ
ಅಡ್ಡೂರು, ಫೆ. 17: ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಪಿಎಫ್ಐ ಅಡ್ಡೂರು ವಲಯ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ಇಂದು ಬೆಳಗ್ಗೆ ಇಲ್ಲಿನ ಜಂಕ್ಷನ್ ನಲ್ಲಿ ನಡೆಯಿತು.
ಎಸ್.ಬಿ.ಯೂಸುಫ್ ಮುಸ್ಲಿಯಾರ್ ದುವಾಶೀರ್ವಚನ ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಪಿಎಫ್ಐ ಅಡ್ಡೂರು ವಲಯಾಧ್ಯಕ್ಷ ಹಕೀಂ ಪಾಂಡೇಲ್ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಪಿಎಫ್ಐ ಅಡ್ಡೂರು ವಲಯ ಸದಸ್ಯ ಶರೀಫ್ ಗೋಳಿಪಡ್ಪು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಪಿಐ ಅಡ್ಡೂರು ವಲಯಾಧ್ಯಕ್ಷ ಎ.ಕೆ.ಮುಸ್ತಾಖ್, ಅಡ್ಡೂರು ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಅಹ್ಮದ್ ಬಾವಾ ಅಂಗಡಿಮನೆ, ಗೌರವಾಧ್ಯಕ್ಷ ಎ.ಎಸ್.ಬಾವುಂಞಿ, ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವಾ, ಗೌರವಾಧ್ಯಕ್ಷ ಎಂ.ಎಚ್. ಮುಹಿಯುದ್ದೀನ್, ಅಡ್ಡೂರು ಎಸ್ ವೈಎಸ್ ಘಟಕಾಧ್ಯಕ್ಷ ಅಬ್ದುಲ್ ರಹಿಮಾನ್ ಮತ್ತಿತರರು ಉಪಸ್ಥಿತರಿದ್ದರು.
ಫರ್ವೀಝ್ ತೋಕೂರು ಸ್ವಾಗತಿಸಿ, ವಂದಿಸಿದರು. ಅಬೂಬಕ್ಕರ್ ಶಹೀಮ್ ಪಿಎಫ್ಐ ಸ್ಮರಿಸಿ ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.