ಉಡುಪಿ: ಪಿಎಫ್ಐ ಸಂಸ್ಥಾಪನ ದಿನಾಚರಣೆ
ಉಡುಪಿ, ಫೆ.18: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ವಿಭಾಗದ ವತಿಯಿಂದ ಸಂಸ್ಥಾಪನ ದಿನವನ್ನು ರವಿವಾರ ಉಡುಪಿಯಲ್ಲಿ ಆಚರಿಸಲಾಯಿತು.
ಪಿಎಫ್ಐ ವಿಭಾಗೀಯ ಅಧ್ಯಕ್ಷ ಬಶೀರ್ ಅಂಬಾಗಿಲು ಧ್ವಜಾರೋಹಣ ನೆರವೇರಿಸಿದರು. ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷ ರೆಹಮಾನ್ ಮಲ್ಪೆ ಅಧ್ಯಕ್ಷತೆ ವಹಿಸಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಹುತಾತ್ಮರಾದ ವೀರ ಯೋಧರಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಕಟಪಾಡಿ, ನಝೀರ್ ಅಂಬಾಗಿಲು. ಪಿಎಫ್ಐ ವಲಯ ಅಧ್ಯಕ್ಷ ಮಜೀದ್ ನಿಟ್ಟೂರು ಮೊದಲಾದ ವರು ಉಪಸ್ಥಿತರಿದ್ದರು.
Next Story