ಅಮೆಮಾರ್ : ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆ
ಬಂಟ್ವಾಳ, ಫೆ. 19: ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯು ಶಾಖಾಧ್ಯಕ್ಷ ಮಕ್ಬೂಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಧ್ವಜರೋಹಣ ವನ್ನು ಬದ್ರಿಯಾ ಜುಮಾ ಮಸೀದಿ ಅಮೆಮಾರ್ ಅಧ್ಯಕ್ಷ ಹಾಜಿ ಉಮರಬ್ಬ ನೆರವೇರಿಸಿ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್ ದುವಾಗೈದರು.
ಸ್ಥಾಪನೆ ದಿನಾಚರಣೆ ಕುರಿತು ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಸೀದಿ ಸದಸ್ಯರಾದ ಅಬ್ದುಲ್ ಹಮೀದ್, ಅಬ್ದುಲ್ ರಝಾಕ್, ಎಸ್ಕೆಎಸ್ಸೆಸ್ಸೆಫ್ ಫರಂಗಿಪೇಟೆ ಕ್ಲಷ್ಟರ್ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್, ಉಪಾಧ್ಯಕ್ಷರಾದ ಮುಖ್ತಾರ್, ಅಬ್ದುಲ್ ಹಮೀದ್, ಸಿದ್ದೀಖ್, ಶಂಸುದ್ದೀನ್, ಇಬ್ರಾಹಿಮ್, ಎಸ್ಕೆಎಸ್ಸೆಸ್ಸೆಫ್ ಶಾಖಾ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಸ್ವಾಗತಿಸಿ, ಕ್ಶಾಂಪಸ್ ವಿಂಗ್ ಕನ್ವೀನರ್ ತಮೀಮ್ ಅಮೆಮಾರ್ ವಂದಿಸಿದರು.
Next Story