ಜುಗಾರಿ: 10 ಮಂದಿ ಸೆರೆ
ಕಾರ್ಕಳ, ಫೆ.20: ರೆಂಜಾಳ ಗ್ರಾಮದ ಹಾಲಿನ ಡೈರಿ ಬಳಿಯ ಹಾಡಿಯಲ್ಲಿ ಫೆ.20ರಂದು ಬೆಳಗಿನ ಜಾವ ಇಸ್ಪೀಟು ಜುಗಾರಿ ಆಡುತ್ತಿದ್ದ 10 ಮಂದಿಯನ್ನು ಬಂಧಿಸಿದ್ದಾರೆ.
ಉಮೇಶ್ ಶೆಟ್ಟಿ, ರಾಜೇಶ್ ಪೂಜಾರಿ, ತಾಜ್, ಸಿದ್ದಿಕ್, ನಜೀರ್ ಅಹಮ್ಮದ್, ಪ್ರಕಾಶ್ ಭಟ್, ಶೇಖರ ಮೇರಾ, ನಾಗೇಶ್ ಆಚಾರಿ, ಸುಧೀರ್ ಎಸ್., ಮಧ್ವರಾಜ್ ಬಂಧಿತ ಆರೋಪಿಗಳು. ಇವರಿಂದ 11,170ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸತೀಶ್ ಶೆಟ್ಟಿ ಬಂಗಾರು ಎಂಬಾತ ಪರಾರಿ ಯಾಗಿದ್ದಾನೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story