ಆಲೀಸ್ ಫೆರ್ನಾಂಡಿಸ್ ನಿಧನ
ಉಡುಪಿ, ಫೆ. 23: ಮೂಡನಿಡಂಬೂರು ಗ್ರಾಮದ ಕಾಡಬೆಟ್ಟು ನಿವಾಸಿ ದಿ. ರೇಮಂಡ್ ಫೆರ್ನಾಂಡಿಸ್ರ ಪತ್ನಿ ಆಲೀಸ್ ಫೆರ್ನಾಂಡಿಸ್ (89) ಇಂದು ನಸುಕಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನಿವೃತ್ತ ಯೋಧ ಜಾರ್ಜ್ ಫೆರ್ನಾಂಡಿಸ್ ಸಹಿತ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಇವರು ಅಂಬಾಗಿಲು ಶ್ರೀಗಣೇಶೋತ್ಸವ ಸಮಿತಿಗೆ ಕಟ್ಟೆ, ನಗರದ ಶೋಕಾ ಮಾತ ಇಗರ್ಜಿಗೆ ದೊಡ್ಡ ಗ್ರೆಟ್ಟೊ, ಕನ್ನರ್ಪಾಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆಗೆ ಎರಡು ತರಗತಿ ಕೊಠಡಿಗಳನ್ನಲ್ಲದೆ, ವಿವಿಧ ದೇವಸ್ಥಾನಗಳು, ಶಿಕ್ಷಣ ಸಂಸ್ಥೆಗಳಿಗೆ ವಿವಿಧ ಸಂದರ್ಭಗಳಲ್ಲಿ ದೊಡ್ಡ ಮೊತ್ತದ ಆರ್ಥಿಕ ಸಹಾಯವನ್ನು ನೀಡಿ ಕೊಡುಗೈ ದಾನಿ ಎನಿಸಿಕೊಂಡಿದ್ದರು.
Next Story