ಫೆ. 28ರಿಂದ ಪೊಲಿಪು ಉರೂಸ್ ಸಮಾರಂಭ
ಕಾಪು, ಫೆ. 25: ಕಾಪುವಿನ ಇತಿಹಾಸ ಪ್ರಸಿದ್ಧ ಎರಡು ವರ್ಷಗಳಿಗೊಮ್ಮೆ ನಡೆಯುವ ಸಯ್ಯಿದ್ ಶಂಸುದ್ದೀನ್ ವಲಿಯುಲ್ಲಾಹಿ ಪೊಲಿಪು ಇದರ ಉರೂಸ್ ಸಮಾರಂಭವು ಫೆ. 28ರಿಂದ ಮಾರ್ಚ್ 2ರವರೆಗೆ ನಡೆಯಲಿದೆ.
ಸೋಮವಾರ ಕಾಪು ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪೊಲಿಪು ಜುಮಾ ಮಸೀದಿಯ ಉಪಾಧ್ಯಕ್ಷ ಅಮೀರ್ ಹಂಝ ಮಾಹಿತಿ ನೀಡಿದರು.
ಫೆ. 28ರಂದು ಸಯ್ಯಿದ್ ಸಂಶುದ್ದೀನ್ ತಂಙಳ್ ಅಲ್-ಬಾಅಲವಿ, ಗಾಂಧಿನಗರ ಇವರು ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಯ್ಯಿದ್ ಸಿರಾಜುದ್ದೀನ್ ತಂಙಳ್ ಅಲ್-ಬಾಅಲವಿ ಸ್ವಲಾತ್ ನೇತೃತ್ವ ವಹಿಸಲಿದ್ದಾರೆ. ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಮಾರ್ಚ್ 1ರಂದು ಕಾಪು ಜುಮ್ಮಾ ಮಸೀದಿ ಖತೀಬ್ ಮುಹಮ್ಮದ್ ಇರ್ಶಾರ್ ಸಅದಿ ಮುಖ್ಯಪ್ರಭಾಷಣ ಮಾಡಲಿದ್ದಾರೆ. 2ರಂದು ರಾಜ್ಯಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ಮಾ. 2ರಂದು ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಯ್ಯಿದ್ ಹುಸೈನ್ ಅಹ್ದಲಿ ತಂಙಳ್, ಉಪ್ಪಳ್ಳಿ ಚಿಕ್ಕಮಗಳೂರು ಇವರು ಆಧ್ಯಾತ್ಮಿಕ ಮಜ್ಲಿಸ್ನ ನೇತೃತ್ವ ಹಾಗೂ ದುವಾ ನೇತೃತ್ವ ಹಾಗೂ ದುವಾ ನೆರವೇರಿಸಲಿದ್ದಾರೆ. ಅಲ್ಹಾಜ್ ಪಿ.ಬಿ.ಅಹ್ಮದ್ ಮುಸ್ಲಿಯಾರ್ ಇವರನ್ನು ಸನ್ಮಾನಿಸಲಾಗುವುದು. ಸಂಜೆ 4.30ಕ್ಕೆ ಸಂದಲ್ ಮೆರವಣಿಗೆ ನಡೆಯಲಿದ್ದು, ರಾತ್ರಿ 9ರಿಂದ ಅನ್ನದಾನ ನಡೆಯಲಿದೆ.
ಮಸೀದಿಯ ಅಧ್ಯಕ್ಷ ಕೆ.ಎಸ್.ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕೆ.ಎಮ್.ರಝಾಕ್, ಶೇಖ್ ನಝೀರ್, ಖತೀಬ್ ಮುಹಮ್ಮದ್ ಇರ್ಷಾದ್ ಸಅದಿ ಉಪಸ್ಥಿತರಿದ್ದರು.