ಮುಂಡಗೋಡ: ತಾಯಿ-ಮಗಳು ನಾಪತ್ತೆ
ಮುಂಡಗೋಡ: ತಾಲೂಕಿನ ನಾಗೂನುರ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ನಾಗನೂರ ಗ್ರಾಮದ ಮೀನಾಕ್ಷಿ ಬೋವಿ ಮತ್ತು ಈಕೆಯ ನಾಲ್ಕು ವರ್ಷದ ಮಗಳು ಕಾಣೆಯಾಗಿದ್ದಾರೆ. ಫೆ.28 ರಂದು ಮುಂಡಗೋಡಕ್ಕೆ ಆಧಾರ್ ಕಾರ್ಡ್ ಮಾಡಿಸಲಿಕ್ಕೆ ಹೋಗುವುದಾಗಿ ಹೇಳಿ ತೆರಳಿದ ಮೀನಾಕ್ಷಿ ಅವರು ನಾಪತ್ತೆಯಾಗಿದ್ದಾರೆ. ತಮ್ಮ ಮಗಳನ್ನು ಹುಡಕಿ ಕೊಡಿ ಎಂದು ಮಹಿಳೆಯ ತಂದೆ ತಿಮ್ಮಣ್ಣ ಬೋವಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
Next Story