ಮಾ. 10ರಂದು ಬೋಳಂತೂರಿನಲ್ಲಿ ರಕ್ತದಾನ ಶಿಬಿರ
ಬಂಟ್ವಾಳ, ಮಾ. 5: ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್, ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಸಹಭಾಗಿತ್ವದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 58ನೆ ರಕ್ತದಾನ ಶಿಬಿರ ಮಾ. 10ರಂದು ಬೆಳಿಗ್ಗೆ ಬೋಳಂತೂರು ಎನ್.ಸಿ ರೋಡ್ನಲ್ಲಿ ನಡೆಯಲಿದೆ.
ಅಸೈಯದ್ ಶಿಹಾಬುದ್ದೀನ್ ತಂಙಳ್ ಮದಕ ದುವಾ ಆಶೀರ್ವಚನ ನೀಡಲಿದ್ದಾರೆ. ಮುಶ್ತಕುರ್ರಹ್ಮಾನ್ ತಂಙಳ್ ಚಟ್ಟೆಕಲ್ಲು ಉದ್ಘಾಟಿಸಲಿದ್ದಾರೆ. ಕಲ್ಲಡ್ಕ ಸೆಕ್ಟರ್ ಎಸ್ಸೆಸ್ಸೆಫ್ ಅಧ್ಯಕ್ಷ ಮುಹಮ್ಮದ್ ಮಜೀದ್ ಅಧ್ಯಕ್ಷತೆ ವಹಿಸಲಿದ್ದಾರೆ. ದಾರುಲ್ ಅಶ್ ಅರಿಯ್ಯದ ವ್ಯವಸ್ಥಾಪಕ ಮುಹಮ್ಮದಾಲಿ ಸಖಾಫಿ ಭಾಷಣ ಮಾಡಲಿದ್ದಾರೆ. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ರಕ್ತದಾನ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಉಪಾಧ್ಯಕ್ಷ ಮುನೀರ್ ಸಖಾಫಿ ಸಂದೇಶ ಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story