ಕಾರ್ಕಳ: ಮಾ.16ರಂದು ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ
ಕಾರ್ಕಳ: ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಹಾಗೂ ಜೇಸಿಐ ಕಾರ್ಕಳದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯು ಕೆ.ಇ.ಬಿ. ರಸ್ತೆ ಕಿಸಾನ್ ಸಭಾಭವನದಲ್ಲಿ ಮಾ.16ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಪುರಸಭೆ ಮುಖ್ಯಾಧಿಕಾರಿ ಮೇಬಲ್ ಡಿಸೋಜ ಉದ್ಘಾಟಿಸಲಿದ್ದು, ಮಹಿಳಾ ಮಂಡಲಿಗಳ ಒಕ್ಕೂಟದ ಅಧ್ಯಕ್ಷೆ ಯಶೋಧ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ನಗರ ಪೊಲೀಸ್ ಠಾಣಾಧಿಕಾರಿ ನಂಜ ನಾಯ್ಕ್, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ ನಾಯ್ಕ್ ವಿ., ಕುಕ್ಕುಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರತೀಕ್ಷಾ ಸಿ.ಶೆಟ್ಟಿ ಉಪಸ್ಥಿತರಿರುವರು.
ಮಹಿಳೆಯರ ಆರೋಗ್ಯ ಕುರಿತು ಜೇಸಿಐ ಅಧ್ಯಕ್ಷೆ ದಿವ್ಯ ಸ್ಮಿತಾ ಭಟ್ ಮಾತನಾಡುವರು. ಸಂಪನ್ಮೂಲ ವ್ಯಕ್ತಿಯಾಗಿ ನೋಟರಿ ನಂದಿನಿ ಬಿ.ಶೆಟ್ಟಿ ಭಾಗವಹಿಸಿ ಮಹಿಳೆಯರ ಹಕ್ಕುಗಳು ಕುರಿತು ಮಾತನಾಡುವರು. ಈ ಸಂದರ್ಭದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿ ವಿಜೇತ, ಜಿಲ್ಲಾ ಮಹಿಳಾ ಮಂಡಲಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಬಿ.ಕಾಂಚನ್ ಅವರಿಗೆ ಸನ್ಮಾನ ನಡೆಯಲಿದೆ.