ಉಜಿರೆ: ಚಲ್ ಸಫರ್ ಡಾಟ್ ಕಾಮ್, ಅಟ್ಲಾಸ್ ಉಮ್ರಾ ಸಂಸ್ಥೆ ಕಾರ್ಯಾರಂಭ
ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್
ಬೆಳ್ತಂಗಡಿ : ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅಯಾನ್ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ ಸೇವೆಯನ್ನು ಇದೀಗ ಚಲ್ಸಫರ್ ಡಾಟ್ಕಾಮ್ ಇ ಕಾಮರ್ಸ್ ವೆಬ್ಸೈಟ್ ಮೂಲಕ ಉಜಿರೆಗೆ ವಿಸ್ತರಿಸಿದೆ. ಜತೆಗೆ ದೇಶದ ಪ್ರತಿಷ್ಠಿತ ಸಂಸ್ಥೆ ಅಟ್ಲಾಸ್ ಉಮ್ರಾ ಸೇವೆಯನ್ನೂ ಉಜಿರೆಯಲ್ಲಿ ಪ್ರಾರಂಭಿಸಿದೆ.
ಉಜಿರೆಯ ವಿಶ್ವಾಸ್ ಸಿಟಿ ಸೆಂಟರ್ ಕಟ್ಟಡದ ಮೊದಲ ಮಹಡಿಯಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅಟ್ಲಾಸ್ ಉಮ್ರಾ ಸೇವೆಯನ್ನು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ಅಲ್ಹಾದಿ ತಂಙಳ್ ದುಆ ಮೂಲಕ ಉದ್ಘಾಟಿಸಿದರು.
ಅತಿಥಿಗಳಾಗಿ ಉಜಿರೆ ಹಳೆಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಅಲ್ಹಾಜ್ ಅಬ್ಬಾಸ್ ಮದನಿ, ಆಡಳಿತ ಸಮಿತಿಯ ಅಧ್ಯಕ್ಷ ಅಲ್ಹಾಜ್ ಬಿ.ಎಂ. ಅಬ್ದುಲ್ ಹಮೀದ್, ಮಂಜೊಟ್ಟಿ ಸ್ಟಾರ್ಲೈನ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಸೈಯದ್ ಹಬೀಬ್ ಸಾಹೇಬ್ ಭಾಗವಹಿಸಿದ್ದರು. ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಯು ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಚಲ್ಸಫರ್ ಡಾಟ್ ಕಾಮ್ನ ಅಯಾನ್ ಟೂರ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶೀಯ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಉದ್ಘಾಟಿಸಿದರು. ಸಮಾರಂಭದಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್ ಪ್ರಭಾಕರ್, ಎಸ್ಡಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಟಿ.ಎನ್ ಕೇಶವ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಮಾ ಭಟ್ ಜಿ.ವಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅಯಾನ್ ಟ್ರಾವೆಲ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಯು ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ಚಲ್ಸಫರ್ ಡಾಟ್ ಕಾಮ್ ಸಂಸ್ಥೆಯ ಐಟಿ ಮ್ಯಾನೇಜರ್ ಶೇಖ್ ಹಾರಿಸ್ ಉಜಿರೆ ವಂದಿಸಿದರು. ಚಲ್ಸಫರ್ ಡಾಟ್ ಕಾಮ್ ಬೆಂಗಳೂರು ಕೇಂದ್ರ ಕಚೇರಿ ಮೆನೇಜರ್ ಶ್ವೇತಾ ಡಿಸಿಲ್ವ, ಡಿಜಿಟಲ್ ಮಾರ್ಕೆಟಿಂಗ್ ಎಕ್ಸ್ಕ್ಯೂಟಿವ್ ಮಜೀದ್ ಹುಸೈನ್, ಉಜಿರೆ ಶಾಖೆಯ ಸಿಬ್ಬಂದಿ ವೈಶಾಲಿ ಮತ್ತು ಅಫೀಫಾ ಸಹಕಾರ ನೀಡಿದರು.
ವರ್ಷಕ್ಕೆ ಕನಿಷ್ಠವೆಂದರೂ 1 ಲಕ್ಷ ಮಂದಿಯನ್ನು ಪವಿತ್ರ ಉಮ್ರಾ, ಹಜ್ಜ್ ಯಾತ್ರೆಗೆ ಸುವ್ಯವಸ್ಥಿತವಾಗಿ ಕಳುಹಿಸಿಕೊಡುತ್ತಿರುವ ಸಂಸ್ಥೆ ಅಟ್ಲಾಸ್ ಉಮ್ರಾ. ಇದರ ದೇಶದ 18 ಕೇಂದ್ರಗಳ ಪೈಕಿ ಉಜಿರೆ ಕೇಂದ್ರವೂ ಇದೀಗ ಬುಕ್ಕಿಂಗ್ಗೆ ಅವಕಾಶ. ಸೂಪರ್ ಸೇವರ್ ಪೇಕೇಜ್, ಅವ್ವಲ್, ಆಲಾ, ಅಝೀಮ್, ರಮಝಾನ್ ಪ್ಯಾಕೇಜ್, ಶಾಬಾನ್-ರಮಝಾನ್ ಪ್ಯಾಕೇಜ್ಗಳು 58,500 ರೂ.ನಿಂದ ಪ್ರಾರಂಭಿಸಿ 1.17 ಲಕ್ಷ ರೂ. ವರೆಗಿನ ಪ್ಯಾಕೇಜ್ ವ್ಯವಸ್ಥೆ.
ಅಯಾನ್ ಟ್ರಾವೆಲ್ಸ್, ಚಲ್ಸಫರ್ ಡಾಟ್ ಕಾಮ್ ಮೂಲಕ ವಿಮಾನ, ಬಸ್ಸು, ರೈಲು ಟಿಕೇಟ್ ಕಾದಿರಿಸುವಿಕೆ, ಸಿಂಗಲ್ ಸ್ಟಾರ್ನಿಂದ 7 ಸ್ಟಾರ್ ಹೊಟೇಲ್ ಬುಕ್ಕಿಂಗ್ ವ್ಯವಸ್ಥೆ, ಕುಟುಂಬ ಮತ್ತು ಸ್ನೇಹಿತರ ಪ್ರವಾಸ ಪ್ಯಾಕೇಜ್ಗಳು, ವೀಸಾ- ಪಾಸ್ಪೋರ್ಟ್ ಸೇವೆ, ಜಂಗಲ್ ಲೋಡ್ಜ್ ಮತ್ತು ರೆಸೋರ್ಟ್ಸ್, ನೇಚರ್ ಹೋಲಿಡೇಸ್, ಎಡ್ವೆಂಚರ್ ಹೋಲಿಡೇಸ್, ಪಿಲಿಗ್ರಿಮೇಜ್ ಹೋಲಿಡೇಸ್, ಹೆರಿಟೇಜ್ ಹೋಲಿಡೇಸ್, ಐಸ್ಲ್ಯಾಂಡ್ ಪ್ಯಾಕೇಜ್, ಕಾರ್ಪೋರೇಟ್ ಪ್ಯಾಕೇಜಸ್, ಸ್ಕೂಲ್ ಪ್ಯಾಕೇಜಸ್, ಕ್ರ್ಯೂಸ್ ಬುಕ್ಕಿಂಗ್ಸ್, ಟ್ರಾವೆಲ್ ಇನ್ಶ್ಯೂರೆನ್ಸ್, ಫೊರೆಕ್ಸ್ ಇತ್ಯಾದಿ ಪ್ರಮುಖ ಸೌಲಭ್ಯಗನ್ನು ಈ ಸಂಸ್ಥೆ ಜನತೆಗೆ ನೀಡಲಿದೆ.