ಮಾ.19: ಕಾಪುವಿನಲ್ಲಿ ಸಾರ್ವಜನಿಕ ಮಹಿಳಾ ಸಭೆ
ಕಾಪು: ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ವತಿಯಿಂದ ಸಾರ್ವಜನಿಕ ಮಹಿಳಾ ಸಭೆಯು ಮಾ.19ರಂದು ಕಾಪುವಿನ ಕಮ್ಯೂನಿಟಿ ಹಾಲ್ನಲ್ಲಿ ಬೆಳಗ್ಗೆ 10 ರಿಂದ 12.30ರವರೆಗೆ ನಡೆಯಲಿದೆ.
ಜೆಐಎಚ್ ಮಹಿಳಾ ವಿಭಾಗದ ರಾಜ್ಯ ಸಂಚಾಲಕಿ ಮೊಹ್ತರಮಾ ಸಾಜಿದುನ್ನಿಸಾ ಸಾಹಿಬಾ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾಜದಲ್ಲಿ ಒಳಿತಿನ ಬೆಳಕನ್ನು ಹರಡಿರಿ ಎಂಬ ಶೀರ್ಷಿಕೆಯೊಂದಿಗೆ ನಡೆಯುವ ಸಮಾವೇಶದಲ್ಲಿ ರಾಜ್ಯ ಸಹ ಸಂಚಾಲಕಿ ಕುಲ್ಸುಮ್ ಅಬೂಬಕರ್, ಉಡುಪಿ ಜಿಲ್ಲಾ ಸಂಚಾಲಕಿ ಜಮಿಲಾ ಸದೀದ, ಕಾರ್ಕಳ ವರ್ತುಲದ ಸಂಚಾಲಕಿ ತನ್ವಿರ್ ಸಾಹಿಬಾ, ಮಾಜಿದ ಮಲ್ಪೆ, ಮೆಹರುನ್ನಿಸಾ ಮಣಿಪಾಲ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಕಾಪು ವರ್ತುಲದ ಸಂಚಾಕಿ ಶೆಹನಾಝ್ ಕಾಪು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story