ಐಐಟಿ ಜೋದ್ಪುರದಲ್ಲಿ ‘ಐಜಿಎನ್ಯುಎಸ್-19’ ಸ್ಪರ್ಧೆ: ಸಹ್ಯಾದ್ರಿ ತಂಡಕ್ಕೆ ರನ್ನರ್ಸ್ ಅಪ್ ಟ್ರೋಫಿ
ಮಂಗಳೂರು, ಮಾ.19: ರಾಜಸ್ಥಾನದ ಜೋದ್ಪುರದ ಐಐಟಿಯಲ್ಲಿ ಇತ್ತೀಚೆಗೆ ನಡೆದ ‘ಐಜಿಎನ್ಯುಎಸ್-19’ ಸ್ಪರ್ಧೆಯಲ್ಲಿ ಮಂಗಳೂರಿನ ಸಹ್ಯಾದ್ರಿ ವಿದ್ಯಾರ್ಥಿಗಳ ತಂಡವು ರನ್ನರ್ಅಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ರೋಬೋ ಸಾಕರ್ ಸ್ಪರ್ಧೆಯಲ್ಲಿ 2ನೇ ಮತ್ತು 4ನೇ ಸ್ಥಾನ, ಬಾಲ್ಸಾ ಗ್ಲೈಡರ್ನಲ್ಲಿ 2ನೇ ಸ್ಥಾನ, ಲೈನ್ ಫಾಲೋವರ್ನಲ್ಲಿ 3ನೇ ಸ್ಥಾನ, ಲೈಟ್ ಫಾಲೋವರ್ ನಲ್ಲಿ 4ನೇ ಸ್ಥಾನ, ಆರ್ಎಫ್ ಬೋಟ್ ರೇಸ್ ವಿಭಾಗದಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಸಹ್ಯಾದ್ರಿ ತಂಡ ರನ್ನರ್ಸ್-ಅಪ್ ಟ್ರೋಫಿ ಪಡೆಯುವಲ್ಲಿ ಯಶಸ್ವಿಯಾಗಿದೆ.
‘ಐಜಿಎನ್ಯುಎಸ್-19’ ಸ್ಪರ್ಧೆಯಲ್ಲಿ ಸಹ್ಯಾದ್ರಿಯ ಹೃಥ್ವಿಕ್ ಪಟೇಲ್ ಮತ್ತು ಬಿಂದ್ಯ ರಾವ್ ಮಾರ್ಗದರ್ಶನದಲ್ಲಿ 15 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಿಂದ ಸ್ಪರ್ಧಿಸಿದ್ದರು.
Next Story