ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೌಂಡೇಶನ್ ಡೇ ಉಪನ್ಯಾಸ
ಮಂಗಳೂರು, ಮಾ.20: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ಫೌಂಡೇಶನ್ ಡೇ ಉಪನ್ಯಾಸವು ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಬೆಂಗಳೂರಿನ ರಾಡೆಲ್ ಅಡ್ವಾನ್ಸ್ಡ್ ಟೆಕ್ನಾಲಜಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜ್ ನಾರಾಯಣ್ ಉಪನ್ಯಾಸ ನೀಡಿದರು. ಕಾಲೇಜಿನ ನಿರ್ದೇಶಕ ವಂ.ವಿಲ್ಫ್ರೇಡ್ ಪಿ. ಡಿಸೋಜ, ಪ್ರಾಂಶುಪಾಲ ಡಾ.ರಿಯೊ ಡಿಸೋಜ, ಸಹಾಯಕ ನಿರ್ದೇಶಕ ವಂ.ರೋಹಿತ್ ಡಿಕೋಸ್ತಾ, ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಡಾ.ಜೋಸೆಫ್ ಗೊನ್ಸಾಲ್ವಿಸ್, ಕಾರ್ಯಕ್ರಮದ ಆಯೋಜಕಿ ಡಾ.ಅಂಜಲಿ ಗಣೇಶ್ ಉಪಸ್ಥಿತರಿದ್ದರು.
Next Story