ಕಾಸರಗೋಡು: ಬಿಜೆಪಿ ಅಭ್ಯರ್ಥಿಯಾಗಿ ರವೀಶ ತಂತ್ರಿ ಕಣಕ್ಕೆ
ರವೀಶ ತಂತ್ರಿ
ಕಾಸರಗೋಡು, ಮಾ.21: ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕುಂಟಾರು ರವೀಶ ತಂತ್ರಿ ಅವರನ್ನು ಕಣಕ್ಕಿಳಿಸಲಾಗಿದೆ.
ಎ. 23ರಂದು ನಡೆಯಲಿರುವ ಚುನಾವಣೆಗೆ ಕಾಸರಗೋಡಿನಿಂದ ಪ್ರಮುಖ ಪಕ್ಷಗಳ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆ.
ಯುಡಿಎಫ್ ಅಭ್ಯರ್ಥಿಯಾಗಿ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಎಲ್ ಡಿ ಎಫ್ ಅಭ್ಯರ್ಥಿಯಾಗಿ ಕೆ.ಪಿ ಸತೀಷ್ಚಂದ್ರನ್ ರನ್ನು ಈಗಾಗಲೇ ಕಣಕ್ಕಿಳಿಸಲಾಗಿದ್ದು , ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗುತ್ತಿದೆ.
ರವೀಶ ತಂತ್ರಿ ಮೊದಲ ಬಾರಿ ಲೋಕಸಭಾ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. 2016ರಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಯುಡಿಎಫ್ ಅಭ್ಯರ್ಥಿ ಎನ್.ಎ.ನೆಲ್ಲಿಕುನ್ನು ವಿರುದ್ಧ ಎಂಟೂವರೆ ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಪರಾಜಯಗೊಂಡಿದ್ದರು.
Next Story