ಫಾತಿಮಾ ಸೂಪರ್ ಸ್ಟೋರ್ ಶುಭಾರಂಭ
ಮಂಗಳೂರು, ಮಾ.23: ಫಾತಿಮಾ ಟ್ರೇಡರ್ಸ್ ಅವರ ಇನ್ನೊಂದು ಮಳಿಗೆಯು ಕಂಕನಾಡಿ ಹಳೆ ರಸ್ತೆಯಲ್ಲಿರುವ ಮಾಸ್ಕೊ ಮೆರಿಡಿಯನ್ ಸಂಕೀರ್ಣದಲ್ಲಿ ಶುಕ್ರವಾರ ಶುಭಾರಂಭಗೊಂಡಿತು.
ಇಲ್ಲಿನ ಹಾಸ್ಟೆಲ್, ಪಿಜಿ, ಆಸ್ಪತ್ರೆಯ ಕ್ಯಾಂಟೀನ್, ಹೊಟೇಲ್ ಹಾಗೂ ಬಹುಮಹಡಿ ಕಟ್ಟಡದಲ್ಲಿ ವಾಸಿಸುವ ಕುಟುಂಬಗಳಿಗೆ ಸಹಕಾರಿಯಾಗಲೆಂದು ಮಾರುಕಟ್ಟೆ ರಸ್ತೆಯಲ್ಲಿರುವ ಫಾತಿಮಾ ಟ್ರೇಡರ್ಸ್ನಲ್ಲಿ ಸಿಗುವ ರಖಂ ದರದಂತೆಯೇ ಗ್ರಾಹಕರಿಗೆ ಇಲ್ಲಿ ಎಲ್ಲ ರೀತಿಯ ದಿನಬಳಕೆ ಅಡುಗೆ ಆಹಾರ ಸಾಮಗ್ರಿಗಳು ದೊರೆಯಲಿದೆ.
ಮಂಗಳೂರಿನಲ್ಲಿ ಹಲವು ವರ್ಷಗಳಿಂದ ದಿನಬಳಕೆ ಆಹಾರ ಸಾಮಗ್ರಿಗಳನ್ನು ಗ್ರಾಹಕರಿಗೆ ಮಿತ ದರದಲ್ಲಿ ನೀಡುತ್ತಾ ಬಂದಿರುವ ಫಾತಿಮಾ ಟ್ರೇಡರ್ಸ್ ತನ್ನ ಗ್ರಾಹಕರ ಸೇವೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಉದ್ದೇಶದಿಂದ ಕಂಕನಾಡಿ ಬಳಿ ಹೊಸ ಮಳಿಗೆ ತೆರೆಯಲಾಗಿದೆ ಎಂದು ಫಾತಿಮಾ ಟ್ರೇಡರ್ಸ್ ಮಾಲಕರಾದ ಫಾತಿಮಾ ಶರೀಫ್ ಹಾಗೂ ಫೈಸಲ್ ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story