ಸೂರಜ್ ಫ್ರಾನ್ಸಿಸ್ ನರೋನ್ಹಾ ರಿಗೆ ಪಿಎಚ್ಡಿ ಪದವಿ
ಮಂಗಳೂರು: ಮಂಗಳೂರಿನ ಸೂರಜ್ ಫ್ರಾನ್ಸಿಸ್ ನರೋನ್ಹಾ ಅವರು ಮಂಡಿಸಿದ ಪ್ರೌಢ ಮಹಾಪ್ರಬಂಧಕ್ಕೆ ಬೆಳಗಾವಿಯ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಇತ್ತೀಚೆಗೆ ನಡೆದ ತನ್ನ 18ನೇ ಘಟಕೋತ್ಸವದಲ್ಲಿ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಸೂರಜ್ ಅವರು ಮಂಗಳೂರು ವಿವಿಯ ಅಸೋಸಿಯೇಟ್ ಪ್ರೊಪೆಸರ್ ಡಾ.ಪಾಲ್ ಜಿ.ಅಕ್ವೀನಾಸ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಪ್ರಸ್ತುತ ಮಣಿಪಾಲದ ಮಾಹೆಯ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅಸಿಸ್ಟೆಂಟ್ ಪ್ರೊಪೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೂರಜ್, ಮಂಗಳೂರು ಬೋಂದೆಲ್ನ ದಿ.ವಲೇರಿಯನ್ ನರೋನ್ಹಾ ಹಾಗೂ ಜೆಸ್ಸಿ ನರೋನಾ್ಹ ಅವರ ಪುತ್ರ.
Next Story