ನದಿಯಲ್ಲಿ ಮುಳುಗಿ ಮಹಿಳೆ ಮೃತ್ಯು
ಕೊಲ್ಲೂರು, ಮಾ.24: ವಂಡ್ಸೆ ಗ್ರಾಮದ ಚಕ್ರಾ ನದಿಯಲ್ಲಿ ಮಹಿಳೆಯೊಬ್ಬರು ಮುಳುಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಮೃತರನ್ನು ವಂಡ್ಸೆ ಗ್ರಾಮದ ಹೊಲಾಡು ನಿವಾಸಿ ಗಿರಿಜಾ (56) ಎಂದು ಗುರುತಿಸಲಾಗಿದೆ.
ನದಿಯಲ್ಲಿ ಮಳಿ(ಕಪ್ಪೆಚಿಪ್ಪು) ಹೆಕ್ಕುತ್ತಿದ್ದ ಗಿರಿಜಾ ಆಕಸ್ಮಿಕ ವಾಗಿ ನದಿಯ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story