ತಾಯಿ, ಇಬ್ಬರು ಮಕ್ಕಳು ನಾಪತ್ತೆ
ಅಜೆಕಾರು, ಮಾ.24: ಇಬ್ಬರು ಮಕ್ಕಳು ಸಮೇತ ತಾಯಿ ನಾಪತ್ತೆಯಾಗಿ ರುವ ಘಟನೆ ಮಾ.15ರಂದು ಕೆರ್ವಾಶೆ ಗ್ರಾಮದ ಹೆಬ್ಬಾರೊಟ್ಟು ಎಂಬಲ್ಲಿ ನಡೆದಿದೆ.
ಹೆಬ್ಬಾರೊಟ್ಟುವಿನ ಪ್ರಕಾಶ ಪೂಜಾರಿ ಎಂಬವರ ಪತ್ನಿ ಅಶ್ವಿನಿ(27) ಎಂಬ ವರು ಮಕ್ಕಳಾದ ಅನೀಶ್(5) ಮತ್ತು ಪ್ರಣೀಶ್(2) ಎಂಬವರೊಂದಿಗೆ ಮಾ.15ರಂದು ಸಂಜೆ ಮನೆಯಿಂದ ತನ್ನ ಅಣ್ಣನ ಮನೆಯಾದ ಹೊಸ್ಮಾರುವಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story