ಅಲ್ ಮದೀನ ಮಹಿಳಾ ಪಿ.ಯು.ಕಾಲೇಜಿಗೆ ಉತ್ತಮ ಫಲಿತಾಂಶ
ನರಿಂಗಾನ; ಅಲ್ ಮದೀನ ಮಹಿಳಾ ಪಿ.ಯು.ಕಾಲೇಜಿನ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಢೆಗೆ ಹಾಜರಾಗಿದ್ದು 31 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.
ತಾಜುನ್ನಿಸಾ (530), ಆಯಿಶತುಲ್ ಅಫ್ರಾ (528), ವಹೀದ (518), ಸಫ್ರೀನ (511) ಎಂಬ ನಾಲ್ವರು ವಿದ್ಯಾರ್ಥಿನಿಯರು ವಿಶಿಷ್ಟ ದರ್ಜೆಯಲ್ಲೂ, 14 ಮಂದಿ ಪ್ರಥಮ ಶ್ರೇಣಿಯಲ್ಲೂ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿನಿಗಳನ್ನೂ, ಶಿಕ್ಷಕಿಯರನ್ನೂ ಅಲ್ ಮದೀನ ಆಡಳಿತ ಸಮಿತಿ ಅಭಿನಂದಿಸಿದೆ.
Next Story