ಲೋಕಸಭಾ ಚುನಾವಣೆ: ದ.ಕ. ಜಿಲ್ಲೆಯಲ್ಲಿ ಶೇ. 77.25 ದಾಖಲೆ ಮತದಾನ
ಮಂಗಳೂರು, ಎ.18: ಕೆಲವೆಡೆ ಇವಿಎಂಗಳಲ್ಲಿ ದೋಷ, ಸಣ್ಣ ಪುಟ್ಟ ಮಾತಿನ ಚಕಮಕಿ, ವಿವಿ ಪ್ಯಾಟ್ಗಳಲ್ಲಿ ಪ್ರಿಂಟರ್ ಸಮಸ್ಯೆ ಹೊರತುಪಡಿಸಿದರೆ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ಶೇ.77.25 ಮತದಾನದ ಮೂಲಕ ಕಳೆದ ಸಾಲಿನ ದಾಖಲೆಯನ್ನು ಮುರಿದಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 76.67 ಮತದಾನದೊಂದಿಗೆ ಸಾರ್ವಕಾಲಿಕ ಮತದಾನ ಎಂಬ ಹೆಗ್ಗಳಿಕೆ ಪಡೆದಿತ್ತು. 2009ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 74.46 ಮತದಾನದೊಂದಿಗೆ ಕರ್ನಾಟಕದಲ್ಲೇ ಅತ್ಯಧಿಕ ಮತದಾನವಾದ ಜಿಲ್ಲೆ ಎಂಬ ಹೆಗ್ಗಳಿಕೆ ಕಾರಣವಾಗಿತ್ತು.
2018 ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶೇ. 77.63 ಮತದಾನವಾಗಿತ್ತು. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ. 74.78 ಮತದಾನವಾಗಿತ್ತು.
Next Story