---

ಕಾಸರಗೋಡು : ಮತಯಂತ್ರದಲ್ಲಿ ದೋಷ; ಮಂದಗತಿಯಲ್ಲಿ ಮತದಾನ

ಕಾಸರಗೋಡು : ಕಾಸರಗೋಡು ಲೋಕಸಭಾ ಕ್ಷೇತ್ರದ ಮತದಾನ ಮೊದಲ ಅವಧಿಯಲ್ಲಿ ಮಂದಗತಿಯಲ್ಲಿ ನಡೆಯುತ್ತಿದೆ. ಹಲವಾರು  ಮತಗಟ್ಟೆಗಳಲ್ಲಿ ಮತಯಂತ್ರ ದೋಷ ದಿಂದ ಮತದಾನ ಗಂಟೆಗಳಷ್ಟು ವಿಳಂಬವಾಯಿತು.

ಮತದಾನ ಆರಂಭಕ್ಕೆ ಮೊದಲೇ ಮತದಾರರು ಮತಗಟ್ಟೆಯಲ್ಲಿ ಸರದಿ ಸಾಲಲ್ಲಿ  ನಿಂತಿರುವ ದೃಶ್ಯ ಕಂಡುಬರುತ್ತಿತ್ತು . ಆದರೆ  ಮತಯಂತ್ರ ಗಳಲ್ಲಿನ ದೋಷವು ಮತದಾರರಲ್ಲಿ ನಿರಾಶೆ ಮೂಡಿಸಿತು.

ಹಲವು ಕಡೆ ಮತಯಂತ್ರ ಗಳ ಜೋಡಣೆ ಅರಿವಿಲ್ಲದೆ ಸಿಬ್ಬಂದಿಗಳು ಪರದಾಡುವಂತೆ ಮಾಡಿತು. ಮತಯಂತ್ರಗಳ ದೋಷದಿಂದ ಮತದಾನ ಪ್ರಮಾಣ ಕುಸಿತವಾಗಲು ಕಾರಣವಾಗಿದೆ. ಮೊದಲ ಮೂರು ಗಂಟೆ ಅವಧಿಯಲ್ಲಿ 20.1 ಶೇಕಡಾ ಮತದಾನವಾಗಿದೆ.

ಚೇವಾರು  14 ನೇ ನಂಬ್ರದ ಮತಗಟ್ಟೆಯಲ್ಲಿ ಒಂದು ಗಂಟೆಗೂ ಅಧಿಕ ಸಮಯ ಮತದಾನ ವಿಳಂಬಗೊಂಡಿತು. ಮಂಜೇಶ್ವರ, ಮಂಗಲ್ಪಾಡಿ, ಮೊಗ್ರಾಲ್ ಪುತ್ತೂರು, ಕಾಸರಗೋಡಿನ ಹಲ ವು  ಮತಗಟ್ಟೆಗಳಲ್ಲಿ  ಮತದಾನ ವಿಳಂಬವಾಗಿ ಆರಂಭಗೊಂಡಿದ್ದು, ಇದರಿಂದ ಮತದಾನದ ಪ್ರಮಾಣ ಕುಸಿದಿದೆ.

ಎಲ್ ಡಿ ಎಫ್  ಅಭ್ಯರ್ಥಿ  ಕೆ. ಪಿ ಸತೀಶ್ಚಂದ್ರನ್  ತ್ರಿಕ್ಕರಿಪುರ ವಲ್ಲಿಕುನ್ನು  ಮತಗಟ್ಟೆಯಲ್ಲಿ,  ಬಿಜೆಪಿ ಅಭ್ಯರ್ಥಿ  ಕುಂಟಾರು ರವೀಶ ತಂತ್ರಿ  ಕುಂಟಾರು ಎ. ಯು ಪಿ ಶಾಲೆಯಲ್ಲಿ ಬೆಳಿಗ್ಗೆಯೇ ಮತ ಚಲಾಯಿಸಿದರು .

ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಮತದಾರರು ಬೆಳಗ್ಗೆಯೇ ಮತಚಲಾಯಿಸಲು ತಲಪುತ್ತಿದ್ದು  ,  13,60,824 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವರು.

ಕಳೆದ ಬಾರಿ 78.49 ಮತ ದಾನವಾಗಿತ್ತು .

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top