ಬಿಕರ್ನಕಟ್ಟೆ: ಕಾರು ಟ್ರಕ್ ಡಿಕ್ಕಿ
ಮಂಗಳೂರು, ಎ.23 :ನಗರದ ಬಿಕರ್ನಕಟ್ಟೆಯಲ್ಲಿ ವೇಗವಾಗಿ ಬಂದ ಕಾರೊಂದು ಟ್ರಕ್ಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪಿಸಿಆರ್ ವಾಹನದಲ್ಲಿದ್ದ ಪೊಲೀಸರೊಬ್ಬರು ಟ್ರಕ್ ಡ್ರೈವರ್ಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಂತೂರಿನಿಂದ ಬಿಕರ್ನಕಟ್ಟೆಗೆ ತೆರಳುತ್ತಿದ್ದ ಕಾರು ತನ್ನ ದಿಕ್ಕು ತಪ್ಪಿಸಿದಾಗ ಹತ್ತಿರದಲ್ಲಿ ಸಾಗುತ್ತಿದ್ದ ಟ್ರಕ್ಗೆ ಢಿಕ್ಕಿ ಹೊಡೆಯಿತು ಎಂದು ಹೇಳಲಾಗುತ್ತಿದೆ. ಟ್ರಕ್ ಡ್ರೈವರ್ ತಪ್ಪಿಲ್ಲದಿದ್ದರೂ ಪಿಸಿಆರ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾಗ ಕೆಲಹೊತ್ತು ಬಿಗುವಿನ ವಾತವರಣ ನಿರ್ಮಾಣವಾಗಿತ್ತು.
Next Story