ಕುಕ್ಕಾಜೆ ಕಾಪಿಕಾಡ್ನಲ್ಲಿ ಬದ್ರ್ ಮೌಲಿದ್ ಮಜ್ಲೀಸ್
ಕೊಣಾಜೆ: ಕುಕ್ಕಾಜೆ ಕಾಪಿಕಾಡ್ ತಾಜುಲ್ ಉಲಮಾ ಸುನ್ನಿ ಸೆಂಟರ್ನಲ್ಲಿ ಬೃಹತ್ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ಅವರ ನೇತೃತ್ವದಲ್ಲಿ ನಡೆಯಿತು.
ಕಯ್ಯೂರು ಸುನ್ನೀ ಮಹಲ್ ಸಾರಥಿ ಅಬೂಬಕ್ಕರ್ ಲತೀಫಿ ಎಣ್ಮೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಇರಾ ಗ್ರಾಮ ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಎಸ್ವೈಎಸ್ ಕುಕ್ಕಾಜೆ ಬ್ರಾಂಚ್ ಅಧ್ಯಕ್ಷ ಮೊಯ್ದು ಕುಂಞಿ ನಾಡಾಜೆ, ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಮುಸ್ಲಿಯರ್ ಕುಕ್ಕಾಜೆ, ಬಾಯಾರ್ ಮುಜಮ್ಮಹ್ ಮುದರ್ರಿಸ್ ಅಬ್ದುರ್ರಹ್ಮಾನ್ ಸಅದಿ, ಪಂಜಿಕಲ್ಲ್ ಖತೀಬರಾದ ಅಬೂಬಕ್ಕರ್ ಮದನಿ, ಎಸ್.ಕೆ ಬದ್ರುದ್ದೀನ್ ಹಾಜಿ ಕುಕ್ಕಾಜೆ, ಅಬ್ಬಾಸ್ ಮುಸ್ಲಿಯಾರ್ ಕುಕ್ಕಾಜೆ, ಅಬೂಬಕ್ಕರ್ ಸಿದ್ದಿಕ್ ಫಾಳಿಲಿ, ಅಬ್ದುಲ್ ಹಮೀದ್ ಮದನಿ ಕುಕ್ಕಾಜೆ, ಉಸ್ಮಾನ್ ಮುಸ್ಲಿಯಾರ್ ಪಂಚಾಲ್, ಇಸ್ಮಾಯಿಲ್ ದರ್ಬೆ, ಬದ್ರುದ್ದೀನ್ ಮಂಚಿ, ತಾಜುಲ್ ಉಲಮಾ ಸುನ್ನೀ ಸೆಂಟರ್, ಕಾಪಿಕಾಡ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ, ಅಬ್ದುಲ್ ಅಝೀಜ್ ಮೊದಲಾದವರು ಭಾಗವಹಿಸಿದ್ದರು.
ಮಹಮ್ಮದ್ ಸಅದಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರಕ್ ವಿತರಿಸಲಾಯಿತು.