ಕಾಟಿಪಳ್ಳ: ಝೊಹರ ನಿಧನ
ಮಂಗಳೂರು: ಕಾಟಿಪಳ್ಳ ಎರಡನೇ ಬ್ಲಾಕ್ ನಿವಾಸಿ ಉಜಿರೆ ಅಹ್ಮದ್ ಹಾಜಿ ಅವರ ಪತ್ನಿ ಝೊಹರ ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 70 ವರ್ಷ ಪ್ರಾಯವಾಗಿತ್ತು.
ಮೃತರು ಪತಿ, ಐವರು ಪುತ್ರರು, 4 ಮಂದಿ ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇಂದು ಮಗ್ರಿಬ್ ನಮಾಝಿನ ನಂತರ ಕಾಟಿಪಳ್ಳ ಎರಡನೇ ಬ್ಲಾಕಿನ ಈದ್ಗಾ ಖಬರ್ ಸ್ಥಾನದಲ್ಲಿ ದಫನ್ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story