ಅಸೈ ಬದ್ರಿಯಾ ಮದರಸಕ್ಕೆ ಶೇ. 100 ಫಲಿತಾಂಶ
ಮಂಗಳೂರು : ಸಮಸ್ತ ಶಿಕ್ಷಣ ಮಂಡಳಿಯ ಅಧೀನದಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ ಪಬ್ಲಿಕ್ ವಾರ್ಷಿಕ ಪರೀಕ್ಷೆಯಲ್ಲಿ ನಾಟೆಕಲ್ ಅಸೈ ಬದ್ರಿಯಾ ಮದರಸಕ್ಕೆ 4 ವರ್ಷಗಳಿಂದ ಸತತವಾಗಿ 100% ಫಲಿತಾಂಶ ಬಂದಿದೆ.
ಈ ವರ್ಷ ಪರೀಕ್ಷೆಯಲ್ಲಿ ಭಾಗವಹಿಸಿದ 5 ಮತ್ತು 7ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಯಾಗುವ ಮೂಲಕ ವಿಜಯ ಗಳಿಸಿದ್ದಾರೆ.
5ನೇ ತರಗತಿಯಲ್ಲಿ ಫಾತಿಮ ಶಾಝ್ಮ, ಆಯಿಶ ಮಸೀನ, ಆಯಿಶ ಸಿಫ, ಲತೀಫ ಅನೀನ, ಫಾತಿಮ ಸಫ, ಫಾತಿಮ ಸಿದ ಪ್ರಥಮ ಸ್ಥಾನ ಗಳಿಸಿದ್ದಾರೆ. ಮದರಸಕ್ಕೆ ಉತ್ತಮ ಹೆಸರನ್ನು ತಂದು ಕೊಟ್ಟ ಅಧ್ಯಾಪಕರನ್ನು ಹಾಗೂ ವಿದ್ಯಾರ್ಥಿಗಳನ್ನು ಆಡಳಿತ ಸಮಿತಿ ಅಭಿನಂದಿಸಿದೆ.
Next Story