ಮೇ 24ರಿಂದ 26ರವರೆಗೆ ಬಂಟ್ಸ್ ಪ್ರೀಮಿಯರ್ ಲೀಗ್ ಸೆಶನ್ -1
ಮಂಗಳೂರು, ಮೇ 21: ಯುವ ಬಂಟರ ಸಂಘದ ವತಿಯಿಂದ ಮೇ 24ರಿಂದ ಮೇ 26ರವರೆಗೆ ಬಂಟ್ಸ್ ಪ್ರೀಮಿಯರ್ ಲೀಗ್ ಸೆಶನ್ -1ಕ್ರಿಕೆಟ್ ಪಂದ್ಯಾವಳಿಯು ಅಡ್ಯಾರ್ ಸಹ್ಯಾದ್ರಿ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ ಎಂದು ಬಿಪಿಎಲ್ ಅಧ್ಯಕ್ಷ ದೇವಿಚರಣ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮೇ 24ರಂದು ಸಂಜೆ 4:30 ಗಂಟೆಗೆ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಬಂಟ್ಸ್ ಪ್ರೀಮಿಯರ್ ಲೀಗ್ ಸೆಶನ್ -1ಉದ್ಘಾಟನೆಗೊಳ್ಳಲಿದೆ. ಬಂಟ್ಸ್ ಸಮುದಾಯದ ನಡುವಿನ ಸೌರ್ಹಾಅದ ದೃಷ್ಟಿಯಿಂದ ಈ ಕ್ರಿಕೆಟ್ ಲೀಗ್ ನಡೆಯಲಿದೆ. ಇದರಲ್ಲಿ ಪ್ರಶಾಂತ್ ಶೆಟ್ಟಿ ಹಾಗೂ ಅಶಿಶ್ ಶೆಟ್ಟಿ ಮಾಲಕತ್ವದ ಎ.ಜೆ ವಾರಿಯರ್, ವಿಜಯನಾಥ್ ವಿಠಲ್ ಶೆಟ್ಟಿ ಹಾಗೂ ಅರ್ಜುನ್ ರೈ ನೇತೃತ್ವದ ಮಿಜಾರ್ ಎರುಕುಲು ತಂಡ, ಪ್ರೀತಿ ಶೆಟ್ಟಿ ರೈ ನೇತೃತ್ವದ ರೋಯಲ್ ಬಂಟ್ಸ್ ತಂಡ, ಕಿಶೋರ್ ಡಿ. ಶೆಟ್ಟಿ ಮತ್ತು ಪ್ರಶಾಂತ್ ಆಳ್ವ ತಂಡದ ಲೀಡ್ಸ್ ಲಿಮಿಟೆಡ್, ಜಯರಜ್ ಶೆಟ್ಟಿ ಹಾಗೂ ಸೂರಜ್ ಶೆಟ್ಟಿ ನೇತೃತ್ವದ ಪೊಳಲಿ ಟೈಗರ್ಸ್ ತಂಡ, ರಕ್ಷಿತ್ ಶೆಟ್ಟಿ , ಅಜಯ್ ಶೆಟ್ಟಿ ತಂಡದ ತುಳು ನಾಡು , ನಿತಿನ್ ಶೆಟ್ಟಿ ಹಾಗೂ ಪ್ರವೀನ್ ಚಂದ್ರ ಮಾಲಕತ್ವದ ಮುಂಗಳೂರು ಬುಲ್ಸ್ ಹಾಗೂ ಸದಾನಂದ ಶೆಟ್ಟಿ ಮಾಲಕತ್ವದ ಕುಡ್ಲ ಸೂಪರ್ ಕಿಂಗ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ ಎಂದವರು ವಿವರಿಸಿದರು
ಸುದ್ದಿಗೋಷ್ಠಿಯಲ್ಲಿ ಬಿಪಿಎಲ್ನ ಪ್ರಧಾನ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ, ಬಿಪಿಎಲ್ ಕಾರ್ಯಧ್ಯಕ್ಷ ಪ್ರಸಾದ್ ಶೆಟ್ಟಿ, ಸದಸ್ಯರಾದ ಸುರೇಶ್ಚಂದ್ರ ಶೆಟ್ಟಿ, ಮಹಾಬಲ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು.