ಮಣಿಪಾಲ: ಸೌಮ್ಯಗೆ ಪಿಎಚ್ಡಿ ಪದವಿ
ಉಡುಪಿ, ಮೇ 21: ಮಣಿಪಾಲ ಎಂಐಟಿಯ ರಸಾಯನಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಸೌಮ್ಯ ಇವರು ಸೂಪರ್ ಕೆಪಾಸಿಟರ್ ಗಳಿಗಾಗಿ ಕಾರ್ಬನ್ ಪಾಲಿಮರ್ ಸಂಯುಕ್ತ ವಿದ್ಯುದ್ವಾರಗಳ ಸಂಶ್ಲೇಷಣೆ ಮತ್ತು ಪಾತ್ರ ಎನ್ನುವ ವಿಷಯದಲ್ಲಿ ಮಂಡಿಸಿದ ಪ್ರೌಢ ಸಂಶೋಧನಾ ಪ್ರಬಂಧಕ್ಕಾಗಿ ಮಾಹೆಯಿಂದ ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ.
ಎಂಐಟಿಯ ಡಾ.ಎಂ. ಸೆಲ್ವಕುಮಾರ್ ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿರುವ ಸೌಮ್ಯ, ಎಂಐಟಿಯ ಪ್ರೊ. ರಾಘವೇಂದ್ರ ಹೊಳ್ಳರ ಪತ್ನಿ ಹಾಗು ಶ್ರೀಪತಿ ಆಚಾರ್ ಮತ್ತು ಪಾರ್ವತಿ ದಂಪತಿಗಳ ಪುತ್ರಿ. ಸೌಮ್ಯ ಇವರು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಹಾಗೂ ಎನ್ಐಟಿಕೆ ಸುರತ್ಕಲ್ ನ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ.
Next Story