‘ಶಿಕ್ಷಕ’ ವಾರ್ಷಿಕ ಸಂಚಿಕೆಗೆ ಬಹುಮಾನ
ಉಡುಪಿ, ಮೇ 21: ಉಡುಪಿಯ ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಕ್ಷಕ’ ಮಂಗಳೂರು ವಿವಿ 2018-19ನೇ ಸಾಲಿನ ವಾರ್ಷಿಕ ಕಾಲೇಜು ಸಂಚಿಕೆಗಳಿಗೆ ಕೊಡಮಾಡುವ ತೃತೀಯ ಬಹುಮಾನವನ್ನು ಗಳಿಸಿದೆ.
ಕೇವಲ ನೂರು ಮಂದಿ ವಿದ್ಯಾರ್ಥಿಗಳಿರುವ ವೃತ್ತಿಪರ ಕಾಲೇಜೊಂದರಲ್ಲಿ ಪಾಠಗಳು, ದತ್ತಕಾರ್ಯಗಳು, ಬೋಧನಾಭ್ಯಾಸ, ನಿಕಟ ಸೇವಾಪೂರ್ವ ತರಬೇತಿ ಇತ್ಯಾದಿಗಳ ನಡುವೆ ವಿದ್ಯಾರ್ಥಿಗಳ ಸೃಜನಶೀಲತೆಗೆ ಇಂಬು ನೀಡಿ ರುವುದರಿಂದ ಈ ಬಹುಮಾನ ಪಡೆಯಲು ಸಾಧ್ಯವಾಗಿದೆ ಎಂದು ಕಾಲೇಜಿನ ಸಮನ್ವಯಾಧಿಕಾರಿ ಡಾ.ಮಹಾಬಲೇಶ್ವರ ರಾವ್ ತಿಳಿಸಿದ್ದಾರೆ.
Next Story