ವಗ್ಗ ಮದ್ರಸಕ್ಕೆ ಶೇ.100 ಫಲಿತಾಂಶ
ಮಂಗಳೂರು, ಮೇ 21: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ನಡೆದ 2018-19ನೇ ಸಾಲಿನ 5 ಮತ್ತು 7ನೇ ತರಗತಿಗಳ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಗ್ಗ ಮದ್ರಸಕ್ಕೆ ಶೇ.100 ಫಲಿತಾಂಶ ಲಭಿಸಿದೆ.
ವಗ್ಗ ಮಅದನೂರ್ ಉಲೂಂ ಮದ್ರಸದಲ್ಲಿ 7ನೇ ತರಗತಿಯಲ್ಲಿ ಆರು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ಮುಹಮ್ಮದ್ ಫಯಾಝುದ್ದೀನ್ ಪ್ರಥಮ ಸ್ಥಾನ (293), ಆಯಿಷ ಸಿಯಾನ ದ್ವಿತೀಯ ಸ್ಥಾನ (287) ಹಾಗೂ ಹಲೀಮ ಹೈಫ ತೃತೀಯ ಸ್ಥಾನ (286) ಪಡೆದಿದ್ದಾರೆ ಎಂದು ವಗ್ಗ ಮದ್ರಸ ಪ್ರಕಟನೆ ತಿಳಿಸಿದೆ.
Next Story