ಮಂಗಳೂರು: ಅದ್ವೈತ್ ಹುಂಡೈ ವೆನ್ಯೂ ಕಾರು ಮಾರುಕಟ್ಟೆಗೆ ಬಿಡುಗಡೆ
ಮಂಗಳೂರು, ಮೇ 21: ನಗರದ ಕುಂಟಿಕಾನದಲ್ಲಿರುವ ಅದ್ವೈತ್ ಹುಂಡೈ ಶೋರೂಂನಲ್ಲಿ ನೂತನ ಹುಂಡೈ ವೆನ್ಯೂ ಕಾರನ್ನು ಬಿಡುಗಡೆಗೊಳಿಸಲಾಯಿತು. ಯಕ್ಷ ಮಂಜೂಷಾ ತಂಡದ ಯಕ್ಷಗಾನ ಕಲಾವಿದರ ಯಕ್ಷನೃತ್ಯದೊಂದಿಗೆ ವಿನೂತನ ರೀತಿಯಲ್ಲಿ ಕಾರು ಮಾರುಕಟ್ಟೆಗೆ ಬಿಡುಗಡೆಗೊಂಡಿತು.
ಮೂಡುಬಿದಿರೆ ಬಾಲಾಜಿ ಎಂಟರ್ಪ್ರೈಸಸ್ ಮಾಲಕ ವಿಶ್ವನಾಥ ಪ್ರಭು, ಉದ್ಯಮಿ ಬಿ.ಪಿ.ಶೆಣೈ, ಮಂಗಳೂರು ವರ್ತಕರ ಸಂಘದ ಅಧ್ಯಕ್ಷ ಸಿ.ಎ.ರಹೀಂ, ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಆಡಳಿತ ಟ್ರಸ್ಟಿ ಡಾ.ದೇವಿ ಪ್ರಸಾದ್ ಕಾನತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬ್ರಾಂಚ್ ಹೆಡ್ ಸೇಲ್ಸ್ ಶಿವಪ್ರಸಾದ್ ಕಾರಿನ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಅದ್ವೈತ್ ಹ್ಯುಂಡೈನ ಸರ್ವಿಸ್ ಕ್ಲಸ್ಟರ್ ಹೆಡ್ಶ್ರೀ ಶಶಿಕಾಂತ್ ಶೆಟ್ಟಿ, ಬಾಡಿ ಶಾಪ್ ಮ್ಯಾನೇಜರ್ ರಾಘವೇಂದ್ರ, ಸೇಲ್ಸ್ ಮ್ಯಾನೇಜರ್ ಹರ್ಷರಾಜ್ ಮತ್ತು ಮೀನಾ ರೆಗೊ, ಸರ್ವೀಸ್ ಮ್ಯಾನೇಜರ್ ಸುಕೇಶ್ ಉಪಸ್ಥಿತರಿದ್ದರು.
ರಾಜೇಶ್ ಶೋರೂಂ ಮ್ಯಾನೇಜರ್ ರಾಜೇಶ್ ಉಳ್ಳಾಲ್ ಸ್ವಾಗತಿಸಿ, ಅಕೌಂಟ್ ಮ್ಯಾನೇಜರ್ ಸುಧಾಕರ್ ವಂದಿಸಿದರು. ಎಚ್.ಪ್ರಾಮಿಸ್ ಮ್ಯಾನೇಜರ್ ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು.
ಹುಂಡೈ ವೆನ್ಯೂ ವಿಶೇಷತೆ
ದಿ ನ್ಯೂವೆನ್ಯೂ ಕಾರಿನಲ್ಲಿ ಮೂರು ಇಂಜಿನ್ ಆಪ್ಶನ್ ಹೊಂದಿದೆ. ಪೆಟ್ರೋಲ್ 1.2ಲೀ. ಹಾಗೂ 1.0 ಲೀ. ಜಿಡಿಐ ಟರ್ಬೋ ಪವರ್ ಫುಲ್ಇಂಜಿನ್ ಹಾಗೂ 1.4 ಲೀ. ಸಿಆರ್ಡಿಐ ಇಂಜಿನ್ ಕಾರಿನ ವಿಶೇಷತೆ. ದಿ ಡಿಟಿಸಿ(ಡ್ಯೂಯಲ್ಕ್ಲಚ್) ಗೇರ್ಗಳೊಂದಿಗೆ ಫಸ್ಟ್ಇನ್ ಹಾಗೂ ಬೆಸ್ಟ್ಇನ್ ಫೀಚರ್ಗಳಾದ ಇಕೋ ಕೋಟಿಂಗ್, ವೈಯರ್ಲೆಸ್ ಚಾರ್ಜಿಂಗ್, ಆರ್ಕಮಿ ಸೌಂಡ್ಸ್ಇಲೆಕ್ಟ್ರಿಕಲ್, ಸನ್ರೋಪ್ ವಾಯಿಸ್ ಕಮಾಂಡ್ ಹಾಗೂ ಇನ್ನಿತರ ಸೇಫ್ಟಿ ಫೀಚರ್ಗಳಾದ ಎಎಚ್ಎಸ್ಎಸ್, ಇಬಿಡಿ, ಎಬಿಎಸ್, ವಿಎಸ್ಎಂ, ಎಚ್ಎಸಿಗಳನ್ನು ಹೊಂದಿದೆ.
ಪ್ರಥಮ ಬಾರಿಗೆ ಹ್ಯುಂಡೈ ಕಂಪೆನಿ ಬ್ಲೂಲಿಂಕ್ ಆ್ಯಪ್ನ್ನು ಪರಿಚಯಿಸುತ್ತಿದೆ. ಬ್ಲೂಲಿಂಕ್ ಆ್ಯಪ್ನ್ನು ತಮ್ಮ ಮೊಬೈಲ್ ಮೂಲಕ ಉಪಯೋಗಿಸಬಹುದು.