ಸುರತ್ಕಲ್ನ ಎನ್ಐಟಿಕೆ ಆವರಣದಲ್ಲಿ ಮತ ಎಣಿಕೆ
ಮಂಗಳೂರು: ಎನ್ಐಟಿಕೆಯಲ್ಲಿ ಮತಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಂಗಳನ್ನು ( ಭದ್ರತಾ ಕೊಠಡಿ) ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಚುನಾವಣಾ ವೀಕ್ಷಕರ ಉಪಸ್ಥಿತಿ ಯಲ್ಲಿ ತೆರೆಯಲಾಯಿತು.
ಮೂರು ಹಂತದ ಬಿಗಿ ತಪಾಸಣೆ
ಮತ ಎಣಿಕೆ ಕೇಂದ್ರದ ಸುತ್ತ ಹಾಗೂ ಒಳಗೆ ಪೊಲೀಸ್ ಹಾಗೂ ಅರೆ ಸೇನಾ ಪಡೆಗಳ ಸರ್ಪಗಾವಲಿನ ಜತೆಗೆ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಬೇಕಾದರೆ ಅದು ಅಧಿಕೃತ ಅನುಮತಿ ಪತ್ರ ಹೊಂದಿದ್ದರೂ ಮೂರು ಹಂತದ ತಪಾಸಣೆಗೊಳಪಡಬೇಕು.
ಎನ್ ಐಟಿಕೆ ಎದುರಿನ ಹೆದ್ದಾರಿ ರಸ್ತೆ ಯುದ್ದಕ್ಕೂ ಬಿಗಿ ಬಂದೋಬಸ್ತ್, ವಾಹನಗಳ ಸಂಚಾರ ಮಾರ್ಪಾಡು ಮಾಡಿರುವುದರಿಂದ ರಸ್ತೆ ಬಹುತೇಕ ಖಾಲಿಯಾಗಿದೆ. ಬೆರಳೆಣಿಕೆಯ ಸಾರ್ವಜನಿಕ ಬಸ್ಸುಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.