ಬಂಟ್ವಾಳ: ಬಿಜೆಪಿ ಕಾರ್ಯಕರ್ತರ ನೃತ್ಯದೊಂದಿಗೆ ಸಂಭ್ರಮಾಚರಣೆ
ಬಂಟ್ವಾಳ, ಮೇ 23: ಲೋಕಸಭೆ ಚುನಾವಣಾ ಮತ ಎಣಿಕೆಯ ಹಿನ್ನೆಲೆಯಲ್ಲಿ ಬಂಟ್ವಾಳ, ಬಿ.ಸಿ.ರೋಡ್ ನಲ್ಲಿ ಜನಸಂಚಾರ ಎಂದಿಗಿಂತ ಕಡಿಮೆ ಇತ್ತು. ಕಚೇರಿ, ಬ್ಯಾಂಕುಗಳಲ್ಲಿ ಜನದಟ್ಟಣೆ ಇರಲಿಲ್ಲ. ಮಧ್ಯಾಹ್ನದವರೆಗೆ ಜನರ ಓಡಾಟ ಇದ್ದರೂ ಮಧ್ಯಾಹ್ನದ ಬಳಿಕ ರಜೆಯ ವಾತಾವರಣ ಕಂಡುಬಂತು. ಎಲ್ಲರೂ ಚುನಾವಣಾ ಫಲಿತಾಂಶದತ್ತ ದೃಷ್ಟಿ ನೆಟ್ಟಿದ್ದರೆ, ಹಲವರು ವಿಜಯೋತ್ಸವದ ಸಂಭ್ರಮಾಚರಣೆಯತ್ತ ತೆರಳುತ್ತಿದ್ದರು. ಬಿಜೆಪಿ ಕಚೇರಿಯ ಪಕ್ಕದಲ್ಲಿ ಕಾರ್ಯಕರ್ತರು ಜೈಕಾರ ಹಾಕುತ್ತಾ, ನೃತ್ಯದೊಂದಿಗೆ ಸಂಭ್ರಮಾಚರಿಸಿದರು.
Next Story