ದಾರುಲ್ ಕುರ್ ಆನ್ ಮಹಿಳಾ ಶರೀಅತ್ ಕಾಲೇಜಿಗೆ ಶೇ. 100 ಫಲಿತಾಂಶ
ಮಂಗಳೂರು: ಸುನ್ನೀ ಸಂದೇಶ ಪ್ರಕಟಿತ ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಕಿಸಾ ಇದರ ಅದೀನದ ವಾದಿಸ್ಸಲಾಮಃ ನಾರ್ಲಪದವು, ಗಂಜಿಮಠ ದಾರುಲ್ ಕುರ್ ಆನ್ ಮಹಿಳಾ ಶರೀಅತ್ ಕಾಲೇಜ್ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷಾ ಬೋರ್ಡ್ ಚೆಯರ್ ಮ್ಯಾನ್ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಹಾಗೂ ಕೆ.ಎಲ್ ಉಮರ್ ದಾರಿಮಿ ನೇತೃತ್ವದಲ್ಲಿ ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ಉನ್ನತ ಫಲಿತಾಂಶದೊಂದಿಗೆ ಉತ್ತೀರ್ಣರಾಗುವ ಮೂಲಕ ದಾರುಲ್ ಕುರ್ ಆನ್ ಮಹಿಳಾ ಶರೀಅತ್ ಕಾಲೇಜಿಗೆ ಪ್ರಶಂಸೆ ಪಡೆದಿದೆ ಎಂದು ಕಾರ್ಯದರ್ಶಿ ಸಿತಾರ್ ಮಜೀದ್ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story