ಮೇ 26ರಂದು ಜೂನಿಯರ್ ಮಸ್ತಿ ಸೀಸನ್ ಪ್ರಶಸ್ತಿ ಪ್ರದಾನ
ಉಡುಪಿ, ಮೇ 24: ದಾಯ್ಜಿವರ್ಲ್ಡ್ ಟಿವಿ ಮಾಧ್ಯಮ ಮತ್ತು ಉಡುಪಿಯ ಕಿಶೂ ಎಂಟರ್ಪ್ರೈಸಸ್ ಜಂಟಿ ಆಶ್ರಯದಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಜೂನಿಯರ್ ಮಸ್ತಿ ಸೀಸನ್-2 ಇದರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮೇ 26ರಂದು ಸಂಜೆ 5.30ಕ್ಕೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಮ್ ನಲ್ಲಿ ನಡೆಯಲಿದೆ.
ದಾಯ್ಜಿವರ್ಲ್ಡ್ ವಾಹಿನಿಯ ಐದನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮುಜ್ಹೋ ತಾಳೋ ಗಾಯತಿಳೋ ಸೀಸನ್ 1 ಸ್ಪರ್ಧೆಯ ವಿಜೇತರಿಂದ ಪ್ರಥಮ ಬಾರಿಗೆ ಗಾಯನ ರಸ ಸಂಜೆ ಹಾಗೂ ಮಿಸಸ್ ಮೀನಾ ಫ್ಯಾಮಿಲಿ ಸೀರಿಯಲ್ ತಂಡದಿಂದ ವಿನೂತನ ಮನೋರಂಜನಾ ಕಾರ್ಯಕ್ರಮ ಜರಗಲಿದೆ.
ಇದೇ ಸಂದರ್ಭದಲ್ಲಿ ಪ್ರೌಢಶಾಲಾ ಮಟ್ಟದ ಕ್ವಿಜ್ ಸ್ಪರ್ಧೆ ಚಾಣಾಕ್ಷ ಚಾಲೇಂಜ್ ವಿಜೇತ ತಂಡದವರಿಗೆ ಪ್ರಶಸ್ತಿ ನೀಡಲಾಗುವುದು. ಪ್ರವೇಶ ಮುಕ್ತವಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Next Story