ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್ಗೆ ಬೀಳ್ಕೊಡುಗೆ
ಮಂಗಳೂರು, ಮೇ 26: ಮಂಗಳೂರಿನ ಸಂತ ತೆರೆಜಾ ಚರ್ಚ್ನ ಧರ್ಮಗುರು ವಂ.ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್ ಅವರನ್ನು ಬೀಳ್ಕೊಡಲಾಯಿತು. ಇದಕ್ಕೂ ಮೊದಲು ಬಲಿಪೂಜೆ ನೆರವೇರಿಸಲಾಯಿತು.
ಚರ್ಚ್ನ ಉಪಾಧ್ಯಕ್ಷ ರೋಶನ್ ಲಸ್ರಾದೊ ಮಾತನಾಡಿ, ಚರ್ಚ್ಗೆ ಕಳೆದ ಮೂರು ವರ್ಷಗಳಿಂದ ನೀಡಿದ ಸೇವೆಗಾಗಿ ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್ ಅವರಿಗೆ ಧನ್ಯವಾದ ಸಲ್ಲಿಸಿದರು.
ಸಂತ ಅನ್ನಾ ಶಾಲೆಯ ಪ್ರಾಂಶುಪಾಲ ವಂ.ಫಾ.ಪಾವ್ಲ್ ಕ್ರಾಸ್ತಾ ಮಾತನಾಡಿ, ತನ್ನ ಜೀವನದಲ್ಲಿ ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್ ಅವರಿಂದ ಕಲಿತ ಪಾಠಗಳ ಬಗ್ಗೆ ವಿವರಿಸಿದರು. ಬಳಿಕ ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್ ಮಾತನಾಡಿದರು. ಚರ್ಚ್ನ ಪರವಾಗಿ ಫಾ.ವಿನ್ಸೆಂಟ್ ವಿಕ್ಟರ್ ಮೆನೆಜಸ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಫಾ.ಆಲ್ಬರ್ಟ್ ಲೋಬೊ, ಪಾಲನಾ ಮಂಡಳಿಯ ಕಾರ್ಯದರ್ಶಿ ವೀಣಾ ಲೋಬೊ ಇದ್ದರು. ಚರ್ಚ್ನ ಗಾಯನ ಮಂಡಳಿಯಿಂದ ವಿದಾಯ ಗೀತೆ ಹಾಡಿಸಲಾಯಿತು.
Next Story