ಓಶಿಯನ್ ಪರ್ಲ್ನಲ್ಲಿ ‘ಗ್ಲಿಟ್ಜ್’ ಫ್ಯಾಶನ್ ಟ್ರೇಡ್ ಫೇರ್
ಮಂಗಳೂರು, ಮೇ. 23 : ನಗರದ ಕೊಡಿಯಾಲ್ಬೈಲ್ನ ಹೋಟೆಲ್ ಓಶಿಯನ್ ಪರ್ಲ್ನ ಫೆಸಿಫಿಕ್ - IV ಹಾಲ್ನಲ್ಲಿ ಮೇ. 25ರಿಂದ 27ರವರೆಗೆ ನೀತಾ ಕಾಮತ್ರವರ ಗ್ಲಿಟ್ಜ್ ಡಿಸೈನರ್ ಟ್ರೇಡ್ ಫೇರ್ ಆಯೋಜಿಸಲಾಗಿದೆ.
ಅತ್ಯಾಧುನಿಕ ಫ್ಯಾಶನ್ ಜಗತ್ತನ್ನು ಅನಾವರಣಗೊಳಿಸುವ ಈ ಪ್ರದರ್ಶನದಲ್ಲಿ ಫ್ಯಾಶನ್ ಆ್ಯಕ್ಸಸರೀಸ್, ಸ್ಟೈಲ್, ಡೆಕಾರ್ ಮತ್ತು ಲೈಫ್ಸ್ಟೈಲ್ ಹೆಚ್ಚಿನ ಮಿರುಗನ್ನು ನೀಡಲಿದೆ. ರಮ್ಜಾನ್ ಹಬ್ಬದ ಖರೀದಿಗೆ ಅನುಕೂಲವಾಗುವಂತೆ ಮಹಿಳೆಯರಿಗಾಗಿ ಡ್ರೇಪ್ಸ್ ಆ್ಯಂಡ್ ಡೆಕಾರ್, ಕಲಾತ್ಮಕವಾದ ಬೆಳ್ಳಿಯ ಆಭರಣಗಳು, ಹೇರ್, ಆ್ಯಕ್ಸಸರೀಸ್, ಆಕರ್ಷಕ ಎತ್ನಿಕ್ ಉಡುಪುಗಳು, ಕ್ಯಾಶ್ಯುಲ್ ಕ್ಲಾತಿಂಗ್, ಟ್ರೆಂಡಿ ಫೂಟ್ವೇರ್ಸ್, ಚಿಕ್ಬ್ಯಾಗ್ ಹಾಗೂ ಅನೇಕ ಫ್ಯಾಶನ್ಗೆ ಸಂಬಂಧಿತ ವಸ್ತ್ರ ವಿನ್ಯಾಸಗಳು ಇಲ್ಲಿ ರಾರಾಜಿಸಲಿವೆ.
ಈ ಪ್ರದರ್ಶನದಲ್ಲಿ ಹೆಸರಾಂತ ಪ್ರಾಚೀಸ್ ಹೋಮ್ ಫರ್ನಿಶಿಂಗ್ಸ್, ದೆಹಲಿಯ ಟರ್ಕ್ಯಾಶ್ ಸ್ಟುಡಿಯೊ, ಕೊಯಂಬತ್ತೂರಿನ ಕೂಲ್ ಕಾಟನ್ಸ್, ಮುಂಬೈನ ಇಂಡೋ ವೆಸ್ಟರ್ನ್ ಕುರ್ತೀಸ್, ಟ್ರೆಂಡಿ ಕ್ಲಚಸ್ ಬ್ರಾಂಡ್ಗಳು ಭಾಗವಹಿಸಲಿದ್ದು, ವಿಶೇಷವಾಗಿ ಮಹಿಳಾ ಗ್ರಾಹಕರಿಗೆ ಒಮ್ಮೆ ಸಂದರ್ಶಿಸಿ ಖರೀದಿಸುವ ಸದವಕಾಶ ಒದಗಿದೆಯೆಂದು ಈ ಪ್ರದರ್ಶನದ ಆಯೋಜಕಿ ನೀತಾ ಕಾಮತ್ ತಿಳಿಸಿದ್ದಾರೆ.
ಈ ಗ್ಲಿಟ್ಜ್ ಪ್ರದರ್ಶನದಲ್ಲಿ ಮುಖ್ಯವಾಗಿ ಫ್ಯಾಬ್ರಿಕ್ಸ್, ಅಪಾರೆಲ್, ಆ್ಯಕ್ಸಸರೀಸ್, ಸಾರೀಸ್, ಹ್ಯಾಂಡ್ಲೂಮ್ಸ್, ಲಿನೆನ್ಸ್, ಜ್ಯುವೆಲ್ಲರಿ ವಸ್ತುಗಳ ವಿಫುಲ ಸಂಗ್ರಹವಿದ್ದು ಬಹುಮುಖ್ಯವಾಗಿ ಸಾಖಿಯವರ ಕಟ್ವರ್ಕ್ ಸಾರೀಸ್, ಬನಾರಸ್ ಡ್ರೇಪ್ಸ್, ಕರಾಚಿ ಸೂಟ್ಸ್, ಪ್ರಾಚಿಯವರ ಬೆಡ್ ಲಿನೆನ್ಸ್, ಹ್ಯೂ ಆ್ಯಂಡ್ ಹ್ಯಾಲೊ ಕಲೆಕ್ಷನ್ಸ್, ಪುಣೆಯ ಲಕ್ನೋವಿ ಟಾಪ್ಸ್ ಮತ್ತು ಪಲಾಜೋ, ಮುಂಬೈನ ಪ್ಯುರಿಟಿ ಹಾಗೂ ಕೇಕ್ಸ್ & ಬೇಕ್ಸ್ ಸಹ ಲಭ್ಯವಿವೆ ಎಂದು ಪ್ರಕಟನೆ ತಿಳಿಸಿದೆ.