ಹಬ್ಬಕ್ಕೆ ಬಟ್ಟೆ ತರಲು ಹೋದ ಮಹಿಳೆ ನಾಪತ್ತೆ
ಉಡುಪಿ, ಮೇ 31: ಹಬ್ಬಕ್ಕೆ ಬಟ್ಟೆ ತರಲೆಂದು ಉಡುಪಿಗೆ ಹೋದ ಮಹಿಳೆ ಯೊಬ್ಬರು ನಾಪತ್ತೆಯಾಗಿರುವ ಘಟನೆ ಮೂಡನಿಡಂಬೂರು ಗ್ರಾಮದ ಪಂದು ಬೆಟ್ಟು ಎಂಬಲ್ಲಿ ಮೇ 29ರಂದು ಬೆಳಗ್ಗೆ ನಡೆದಿದೆ.
ಪಂದುಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಯಾಸೀನ್ ಎಂಬ ವರ ಪತ್ನಿ ಅಫ್ರೀನ್(24) ಎಂಬವರು ಬಟ್ಟೆ ತರಲು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story