ನೀಟ್ ಪರೀಕ್ಷೆ: ಪುತ್ತೂರು ತಾಲೂಕಿನಲ್ಲಿ ಶ್ರೀರಾಮ್ ಕೈಲಾರ್ ಪ್ರಥಮ
ಉಪ್ಪಿನಂಗಡಿ: ಅಖಿಲ ಭಾರತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀರಾಮ್ ಕೈಲಾರ್ ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶ್ರೀರಾಮ್ ಕೈಲಾರ್ 512 ಅಂಕಗಳಿಸಿದ್ದು, ನೀಟ್ ಪರೀಕ್ಷೆ ಬರೆದ ಇದೇ ಕಾಲೇಜಿನ ವಿದ್ಯಾರ್ಥಿಗಳಾದ ವೈಷ್ಣವಿ ಕೆ.ವಿ. 432 ಅಂಕ, ರಕ್ಷಿತ್ ಬಿ.ವಿ. 338 ಹಾಗೂ ಪ್ರತೀಕ್ಷಾ ಕಾಮತ್ 326 ಅಂಕ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ಕಾಲೇಜಿನ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಯುಎಸ್ಎ ನಾಯಕ್ ಅಭಿನಂದಿಸಿದ್ದಾರೆ.
Next Story