ಅಕ್ರಮ ಜಾನುವಾರು ಸಾಗಾಟ: ಮೂವರ ಸೆರೆ
ಅಜೆಕಾರು, ಜೂ.11: ಈಚರ್ ಗೂಡ್ಸ್ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರನ್ನು ಅಜೆಕಾರು ಪೊಲೀಸರು ಜೂ.11ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಅಜೆಕಾರಿನ ಕಾಡುೊಳೆ ಚೆಕ್ಪೋಸ್ಟ್ನಲ್ಲಿ ಬಂಧಿಸಿದ್ದಾರೆ.
ದಾವಣಗೆರೆಯ ರಾಜಾ ಭಕ್ಷಿ(53),ಜಾಫರ್ ಸಾಧಿಕ್(26), ಇಬ್ರಾಹಿಂ (50) ಬಂಧಿತ ಆರೋಪಿಗಳು.
ಇವರಿಂದ ವಾಹನ ಹಾಗೂ ಅದರಲ್ಲಿದ್ದ ಒಂದು ಕೋಣ ಹಾಗೂ 16 ಎಮ್ಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story