ಮಂಗಳೂರು, ಜೂ.15: ನಗರದ ಮೋರ್ಗನ್ಸ್ಗೇಟ್ ಬಳಿಯ ರಸ್ತೆ ಬದಿಯಲ್ಲಿರುವ ತರಕಾರಿ ಹಾಗೂ ಹಣ್ಣು ಹಂಪಲು ಅಂಗಡಿಯೊಂದರ ಮೇಲೆ ಬೃಹತ್ ಮರವೊಂದು ಉರುಳಿಬಿದ್ದ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಇಂದು ಮುಂಜಾನೆ ಸುರಿದ ಗಾಳಿಮಳೆಗೆ ರಸ್ತೆ ಬದಿಯಲ್ಲಿದ್ದ ಮರ ಅಂಗಡಿಯ ಮೇಲೆ ಉರುಳಿದೆ. ಇದರಿಂದ ಅಂಗಡಿ ಭಾಗಶಃ ಜಖಂಗೊಂಡಿದ್ದು, ಸಾವಿರಾರು ರೂ. ನಷ್ಟ ಉಂಟಾಗಿದೆ.