ಹಿದಾಯ ಫೌಂಡೇಶನ್ ಮಂಗಳೂರು: ದಾನಿಗಳಿಂದ ವಸ್ತು ಸಂಗ್ರಹ; ಫಲಾನುಭವಿಗಳಿಗೆ ವಿತರಣೆ
ಮಂಗಳೂರು: ಹಿದಾಯ ಫೌಂಡೇಶನ್ ವತಿಯಿಂದ ರಮಝಾನ್ ತಿಂಗಳಲ್ಲಿ ಫೋರಂ ಶಾಪಿಂಗ್ ಮಾಲ್ ಮಂಗಳೂರಿನಲ್ಲಿ ಸಂಸ್ಥೆಯ ಬಾಕ್ಸ್ ಅಳವಡಿಸಿ ದಾನಿಗಳಿಂದ ಜನರಿಗೆ ಉಪಯೋಗವಿರುವ ಹಲವು ಸಾಮಗ್ರಿಗಳನ್ನ ಸಂಗ್ರಹಿಸಿ ಫಲಾನುಭವಿಗಳಿಗೆ ತಲುಪಿಸಲಾಯಿತು.
ಹಲವು ದಾನಿಗಳು ಸಂಸ್ಥೆಯ ಬಾಕ್ಸಿನಲ್ಲಿ ಬಟ್ಟೆಗಳನ್ನು ಹಾಗೂ ಮಕ್ಕಳಿಗೆ ಉಪಯೋಗವಿರುವ ವಸ್ತುಗಳನ್ನು ನೀಡಿ ಸಹಕರಿಸಿದರು.
ಸಂಗ್ರಹಿಸಿದ ವಸ್ತುಗಳನ್ನ ಹಿದಾಯ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ಸಾದಿಕ್ ಹಸನ್ ಹಾಗೂ ಸಿಬ್ಬಂದಿಗಳಾದ ಮುಶರ್ರಫ್ ಉಳ್ಳಾಲ್ ಮತ್ತು ನಾಸಿರ್ ಇವರ ನೇತೃತ್ವದಲ್ಲಿ ಸಂಸ್ಥೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಫೋರಂ ಶಾಪಿಂಗ್ ಮಾಲ್ ನ ಸೆಂಟರ್ ಮ್ಯಾನೇಜರ್ ಫಯಾಝ್ ಎಂ.ಎಚ್., ಡಿಜಿಎಂ ಅರವಿನ್ , ಮಾರ್ಕೆಟಿಂಗ್ ಮ್ಯಾನೇಜರ್ ಸುನಿಲ್ ಕೆ.ಎಸ್. ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story