ಪುದು, ಸುಜೀರ್ ವಾರ್ಡಿನಲ್ಲಿ ನಿರ್ಮಾಣವಾದ ಕೊಳವೆ ಬಾವಿ ಉದ್ಘಾಟನೆ
ಫರಂಗಿಪೇಟೆ, ಜೂ. 16: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಜೀರ್ ನಲ್ಲಿ ಪಂಚಾಯತ್ ಅನುದಾನದಲ್ಲಿ ನಿರ್ಮಿಸಿದ ಕೊಳವೆಬಾವಿಯನ್ನು ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷರಾದ ಲಿಡಿಯಾ ಪಿಂಟೊ, ಸುಜೀರು ಮಸೀದಿಯ ಖತೀಬ್ ರವಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ರಮ್ಲಾನ್ ಈ ವಾರ್ಡಿನ ಜನರ ಬಹುಕಾಲದ ಬೇಡಿಕೆಯಾದ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಿಸಲು ಸಹಕರಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಕ್ರತಜ್ಞತೆ ಹೇಳಿದ ಅವರು ಮಾನ್ಯ ಸಚಿವರಾದ ಯು.ಟಿ.ಖಾದರ್ ರವರ ಅನುದಾನದಲ್ಲಿ ಪ್ರಸ್ತುತ ನಡೆಯುತ್ತಿರುವ ವಿವಿಧ ಕಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಜಿಲ್ಲಾ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಸದಸ್ಯರಾದ ಇಕ್ಬಾಲ್ ಸುಜೀರು, ಕಿಶೋರ್ ಸುಜೀರು,, ಮುಮ್ತಾಝ್, ಹುಸೈನ್ ಪಾಡಿ, ಸಲಾಂ ಮಲ್ಲಿ, ಸಲಾಂ ಸುಜೀರು, ಲತೀಪ್ ಸುಜೀರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
Next Story